ವಾಷಿಂಗ್​ ಮಷಿನ್​​ ಒಳಗೆ ಸೇರಿಕೊಂಡ ಹಾವು! ಸ್ವಿಚ್​ ಆನ್​ ಮಾಡಿದ ಮಹಿಳೆ.. ಮುಂದೇನಾಯ್ತು?

snake
Published on

ಫ್ಲೋರಿಡಾ: ವಾಷಿಂಗ್​ ಮಷಿನ್​ ಬಳಸುವಾಗ ಅತ್ಯಂತ ಎಚ್ಚರಿಕೆಯಿಂದಿರಬೇಕು ಎನ್ನುತ್ತಾರೆ. ಮಷಿನ್​ ಒಳಗೆ ಏನಾದರೂ ಇದೆಯೇ ಎನ್ನುವುದನ್ನು ಪರಿಶೀಲಿಸಿ ನಂತರ ಬಟ್ಟೆ ಹಾಕಬೇಕು ಎನ್ನಲಾಗುತ್ತದೆ. ಆದರೆ ಅದನ್ನು ಗಮನಿಸದೆ ಬಟ್ಟೆ ಹಾಕಿದ ಮಹಿಳೆಯೊಬ್ಬಳು ಬೆಚ್ಚಿ ಬಿದ್ದ ಕಥೆಯಿದು..

ಅಮೆರಿಕದ ಫ್ಲೋರಿಡಾದಲ್ಲಿ ಈ ಭಯಾನಕ ಘಟನೆ ನಡೆದಿದೆ. ಮಹಿಳೆಯೊಬ್ಬಳು ವಾಷಿಂಗ್​ ಮಷಿನ್​ನಲ್ಲಿ ಬಟ್ಟೆ ತೊಳೆದಿದ್ದಾಳೆ. ಅದಾದ ನಂತರ ಅದರಲ್ಲೇ ಇದ್ದ ಡ್ರೈಯರ್​ಗೆ ಬಟ್ಟೆ ಹಾಕಿ ಸ್ವಿಚ್​ ಆನ್​ ಮಾಡಿದ್ದಾಳೆ. ಆದರೆ ಅದು ಆನ್​ ಆಗಿಲ್ಲ. ಸಾಕಷ್ಟು ಬಾರಿ ಆನ್​ ಆಫ್​ ಮಾಡಿದ ಮೇಲೆ ಡ್ರೈಯರ್​ನಲ್ಲಿ ಯಾವುದೋ ದ್ರವ ಹರಿಯುತ್ತಿರುವುದು ಕಂಡುಬಂದಿದೆ. ತಕ್ಷಣ ಆಕೆ ಮೆಕಾನಿಕ್​ಗೆ ಕರೆ ಮಾಡಿ ಬರಲು ಹೇಳಿದ್ದಾಳೆ. ಮೆಕಾನಿಕ್​ ಬಂದು ಡ್ರೈಯರ್​ ತೆರೆದು ನೋಡಿದಾಗ ಆತನಿಗೆ ಆಘಾತವಾಗಿದೆ.

ಡ್ರೈಯರ್​ನ ಒಳಗಡೆ ಒಂದು ಹಾವು ಸತ್ತು ಬಿದ್ದಿರುವುದು ಕಂಡುಬಂದಿದೆ. ಅದನ್ನು ಕಂಡೊಡನೆ ಮೆಕಾನಿಕ್​ ಕಿರುಚಿಕೊಂಡಿದ್ದಾನೆ. ಅಲ್ಲಿಗೆ ಓಡಿಬಂದ ಮಹಿಳೆಯೂ ಅದನ್ನು ನೋಡಿ ಕಿರುಚಿಕೊಂಡಿದ್ದಾಳೆ. ಸ್ವಲ್ಪ ಸಮಾಧಾನವಾದ ನಂತರ ಮೆಕಾನಿಕ್​ ಹಾವನ್ನು ತೆಗೆದು ಹಾಕಿದ್ದಾನೆ. ಹಾವು ಸತ್ತಿದ್ದರಿಂದ ಹೆಚ್ಚಿನ ತೊಂದರೆಯಾಗಿಲ್ಲ ಎಂದು ಆತ ತಿಳಿಸಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net