

ನವದೆಹಲಿ: ಈತ, ಮೈ ತುಂಬಾ ದುಡಿದು, ಆರಾಮವಾಗಿ ಮರದ ಕೆಳಗಡೆ ಮಲಗಿದ್ದ. ಎದ್ದಾಗ ಷರ್ಟ್ ಒಳಗಡೆ ಏನೋ ತಣ್ಣಗೆ ಹರಿದಾಡಿದ ಅನುಭವ. ಏನೆಂದೇ ತಿಳಿಯುತ್ತಿಲ್ಲ. ಆದರೆ ಒಮ್ಮೆಲೆ, ಷರ್ಟ್ ಗುಂಡಿಗಳ ನಡುವಿನಿಂದ ಫಳಫಳನೆ ಹೊಳೆಯುತ್ತಿರುವ ಎರಡು ಕಣ್ಣುಗಳು ಕಂಡಿವೆ. ನೋಡನೋಡುತ್ತಿದ್ದಂತೆಯೇ ಅಲ್ಲಿ ಕರಿ ನಾಗರಹಾವಿನ ತಲೆ ಕಂಡಿದೆ! ಆ ವ್ಯಕ್ತಿಗೆ ಹೇಗೆ ಪ್ರತಿಕ್ರಿಯಿಸಬೇಕು? ಇಲ್ಲಿದೆ ಸಂಪೂರ್ಣ ವಿವರ...
ಈ ವಿಡಿಯೋವನ್ನು ಎಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ತಿಳಿದು ಬರದೇ ಇದ್ದರೂ ಈ ವಿಡಿಯೋದಲ್ಲಿರುವ ವಿಚಾರ ಮಾತ್ರ ಭಯಾನಕ. ಈ ವೀಡಿಯೊದಲ್ಲಿ ಕೆಲವರು ಈತನ ಷರ್ಟ್‌ಗೆ ನುಗ್ಗಿದ ನಾಗರಹಾವನ್ನು ಹೊರತೆಗೆಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ವ್ಯಕ್ತಿ ತೆರೆದ ಮೈದಾನದಲ್ಲಿ ಕೋಳಿನಿದ್ದೆ ಮಾಡುತ್ತಿದ್ದಾಗ ಹಾವು ಆತನ ಷರ್ಟ್ ಒಳಗೆ ನುಗ್ಗಿದೆ. ವಿಚಿತ್ರ ಎಂದರೆ, ಈತ ಎಚ್ಚರವಾದಾಗ ಹಾವೂ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಅಲ್ಲಿದ್ದವರು, ಷರ್ಟ್ನ ಗುಂಡಿಗಳನ್ನು ಒಂದೊಂದಾಗಿಯೇ ಬಿಚ್ಚಿ ವ್ಯಕ್ತಿಯನ್ನೂ ಹಾವನ್ನೂ ಕಾಪಾಡಿದ್ದಾರೆ. ಹಾವು ಎಲ್ಲಾದರೂ ಆ ವ್ಯಕ್ತಿಗೆ ಕಚ್ಚಿದ್ದರೆ, ಅದೂ ಸಾಯುವ ಸಾಧ್ಯತೆ ಇತ್ತು. ಅದೃಷ್ಟವಶಾತ್, ವ್ಯಕ್ತಿಯು ಹಾವಿನಿಂದ ಕಚ್ಚಿಸಿಕೊಳ್ಳದೇ ಯಾವುದೇ ಅಪಾಯವಾಗದೇ ಪಾರಾಗಿದ್ದಾನೆ. ವಿಡಿಯೋದ ಕೊನೆಗೆ ಬೃಹತ್ ಗಾತ್ರದ ನಾಗರಹಾವು ಸ್ಥಳದಿಂದ ದೂರ ಸರಿಯುತ್ತಿರುವುದನ್ನು ನಾವು ಕಾಣಬಹುದಾಗಿದೆ.
ಮರದ ಕೆಳಗೆ ಇನ್ನುಮುಂದೆ ನೀವು ನಿದ್ದೆ ಮಾಡುತ್ತೀರಿ ಎಂದಾದರೆ, ಈ ವಿಡಿಯೋ ನಿಮಗೆ ಎಚ್ಚರಿಕೆಯ ಕರೆಗಂಟೆಯೇ ಹೌದು!