ಹೂ ಕೋಸಿನ ಒಳಗೆ ಅವಿತಿದ್ದ ಹಾವು, ತರಕಾರಿ ಖರೀದಿಸುವಾಗ ಎಚ್ಚರ!

sfff
Published on

ಕೋಸು, ಹೂ ಕೋಸು, ಅತವಾ ಯಾವುದೇ ತರಕಾರಿ ಆಗಿರ್ಲಿ ಖರೀದಿಸುವ ಮುನ್ನ ಸ್ವಲ್ಪ ಎಚ್ಚರ ವಹಿಸಬೇಕು ಅನ್ನೋದು ಈ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ. ಸಾಮಾನ್ಯವಾಗಿ ನಾವು ತರಕಾರಿ ಖರೀದಿಸಲೆಂದು ಮಾರ್ಕೆಟ್​​​ಗೆ ಹೋದ್ರೆ ತರಕಾರಿ ಕೊಳೆತಿದೆಯೋ ಇಲ್ವೋ ಎಂಬುದನ್ನ ಗಮನಿಸಿ ತರಕಾರಿ ತಂದು ಬಿಡ್ತೀವಿ.

ಹೂ ಕೋಸು ಖರೀದಿಸ್ತೀವಿ ಅಂದ್ರೆ ಅದರ ಕೆಳಭಾಗವನ್ನೆಲ್ಲ ಗಮನಿಸಲು ಹೋಗೋದಿಲ್ಲ.ಆದ್ರೆ ಈ ವಿಡಿಯೋ ನೋಡಿ ಹೇಗೆ ಹಾವೊಂದು ಹೂ ಕೋಸಿನ ಒಳಭಾಗದಲ್ಲಿ ಅವಿತು ಕುಳಿತಿದೆ ಅಂತಾ. ಈ ವಿಡಿಯೋ ನೆಟ್ಟಿಗರ ಹುಬ್ಬೇರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.
ಮಳೆಗಾಲದ ಸಮಯದಲ್ಲಿ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಕೊಳ್ಳುವಾಗ ಪರಿಶೀಲಿಸಿ ಖರೀದಿ ಮಾಡೋದು ಉತ್ತಮ.

ಪದಾರ್ಥ ಮಾಡುವ ವೇಳೆ ಹೂ ಕೋಸು ಹೊರತೆಗೆದಾಗ ಹಾವು ಪ್ರತ್ಯಕ್ಷವಾಗಿ ಅಂತ್ಹೇಳಿ ವಿಡಿಯೋ ಚಿತ್ರೀಕರಣದ ಸಮಯದಲ್ಲಿ ವ್ಯಕ್ತಿಯೋರ್ವ ಹೇಳೋದನ್ನ ಕೂಡಾ ಕೇಳಬಹುದು.
ಇಲ್ಲಿ ಸ್ವಲ್ಪ ಯಾಮಾರಿದ್ರೂ ಸಹ ಇಬ್ಬರಿಗೂ ಅಪಾಯ ಖಚಿತ ಯಾಕಂದ್ರೆ ತರಕಾರಿ ಕಟ್​​ ಮಾಡುವ ಭರದಲ್ಲಿ ಹರಿತವಾದ ಚಾಕುವಿನಿಂದ ಕಟ್​​ ಮಾಡುವ ವೇಳೆ ಎಲ್ಲಿಯಾದರೂ ಹಾವಿಗೆ ತಾಕಿದರೂ ತೊಂದರೆ ಅಲ್ಲವೇ ಹಾವೇ ನಮ್ಮ ಕೈಗೆ ಕಚ್ಚಿದ್ರೂ ನಾವು ಆಸ್ಪತ್ರೆಗೆ ದಾಖಲಾಗುವಂತಹ ಪರಿಸ್ಥಿತಿ.


ದೇವೇಂದ್ರ ಸೈನಿ ಎಂಬ ವ್ಯಕ್ತಿ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಈ ವಿಡಿಯೋಚವನ್ನ ಹಂಚಿಕೊಂಡಿದ್ದು, ಹೂ ಕೋಸಿನ ಪದರಗಳಲ್ಲಿ ಹಾವುಗಳು ಸಲೀಸಾಗಿ ಅವಿತು ಕುಳಿತುಕೊಳ್ಳಬಹುದು ಎಚ್ಚರ ವಹಿಸಿ ಎಂದು ಟ್ವೀಟ್​​ನಲ್ಲಿ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net