

ನವದೆಹಲಿ: ಹಾವುಗಳಿಗೆ ( Snake ) ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಆದರೆ, ಕೆಲವೊಂದು ವಿಡಿಯೋಗಳು ವಿಶೇಷ ಕಾರಣಕ್ಕೆ ಕ್ಷಣಾರ್ಧದಲ್ಲೇ ವೈರಲ್ ಆಗಿಬಿಡುತ್ತವೆ. ಒಬ್ಬ ಮಹಿಳೆ ಮಲಗಿದ್ದಾಗ... ಅವಳ ಕೂದಲಿನೊಳಗೆ ನುಗ್ಗಿ ಹಾವೊಂದು ಹರಿದಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಹಾವುಗಳು ಬೈಕು, ಕಾರುಗಳು ಮತ್ತು ಶೂಗಳಲ್ಲಿ ಸೇರಿಕೊಳ್ಳುತ್ತವೆ. ಅದಕ್ಕಾಗಿಯೇ ಸ್ವಲ್ಪ ಜಾಗರೂಕತೆ ಅಗತ್ಯ. ಇಂತಹ ಸಂದರ್ಭಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ವೈರಲ್ ಆಗುತ್ತಲೇ ಇರುತ್ತವೆ. ಇತ್ತೀಚೆಗೆ ಇಂತಹದೊಂದು ವಿಡಿಯೋ ಟ್ರೆಂಡಿಂಗ್ ಆಗಿದೆ.
ವಿಡಿಯೋದಲ್ಲಿ ಏನಿದೆ?:
ಮಹಿಳೆ ಗಾಢ ನಿದ್ರೆಯಲ್ಲಿದ್ದಾಗ, ಹಾವು ನಿಧಾನವಾಗಿ ತೆವಳುತ್ತಾ ಅವಳ ಕೂದಲಿನೊಳಗೆ ನುಗ್ಗುತ್ತದೆ. ತಲೆಯಲ್ಲಿ ಏನೋ ಹರಿದಾಡುತ್ತಿರುವಂತೆ ಭಾಸವಾಗುತ್ತಿದ್ದಂತೆ.. ಹೆಂಗಸು ಥಟ್ಟನೆ ಸರಿದು.. ಕೈಯಿಂದ ನೋಡಿಕೊಂಡಳು. ಅದರ ನಂತರ ಏನಾಯಿತು ಎಂದು ತಿಳಿಯುವುದಿಲ್ಲ.. ಯಾಕೆಂದ್ರೆ ಈ ವೀಡಿಯೊ ಪೂರ್ಣವಾಗಿಲ್ಲ...
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಲು ಉದ್ದೇಶಪೂರ್ವಕವಾಗಿ ಈ ವಿಡಿಯೋ ಮಾಡಲಾಗಿದೆ ಎಂಬುದು ಕೆಲ ನೆಟಿಜನ್ ಗಳ ಅಭಿಪ್ರಾಯ. ಅಪಾಯಕಾರಿ ಹಾವುಗಳೊಂದಿಗೆ ಇಂತಹ ಸಾಹಸಗಳು ಸೂಕ್ತವಲ್ಲ ಎಂದು ಹೇಳಲಾಗುತ್ತದೆ. ಈ ವೀಡಿಯೊ ಪ್ರಸ್ತುತ ಟ್ರೆಂಡಿಂಗ್ ಆಗಿದೆ.