ಬಾಲಕನ ನಿಕ್ಕರ್​ ಒಳಗೆ ಅಡಗಿ ಕುಳಿತಿತ್ತು ಹಾವು! ಕಡೆಗೆ ಏನಾಯ್ತು?

snake
Published on

ಬ್ಯಾಂಕಾಕ್: ಹಾವುಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕೆಲವೊಮ್ಮೆ ಮನೆಗಳಿಗೆ ನುಗ್ಗುತ್ತವೆ. ಮನೆಯಲ್ಲಿ ಫ್ರಿಜ್, ಫ್ಯಾನ್, ಬೆಡ್..ಹೀಗೆ ಎಲ್ಲೆಂದರಲ್ಲಿ ಬೆಚ್ಚಗಿನ ಜಾಗದಲ್ಲಿ ಅಡಗಿ ಕುಳಿತುಕೊಳ್ಳುತ್ತವೆ. ಆದರೆ ಇತ್ತೀಚಿನ ವೈರಲ್ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಮಲಗಿದ್ದ ಹುಡುಗನ ನಿಕ್ಕರ್​ ಒಳಗೆ ಹಾವೊಂದು ಪ್ರವೇಶಿಸಿದೆ.

ಅಂದಹಾಗೆ ಈ ಘಟನೆ ನಡೆದಿರುವುದು ಥಾಯ್ಲೆಂಡ್ ನ ರೇಯಾಂಗ್ ಎಂಬ ಪ್ರದೇಶದಲ್ಲಿ. ಬಾಲಕನೊಬ್ಬ ಬೆಡ್ ಮೇಲೆ ಮಲಗಿರುವಾಗಲೇ ಹಾವು ಹಾಸಿಗೆಯ ಮೇಲೆ ಬಂದದ್ದು ಕಡೆಗೆ ಅವನ ಡ್ರಾಯರ್‌ಗೆ ಹೋಗಿದೆ. ಅಲ್ಲಿಯವರೆಗೆ ನಿದ್ರೆಯಲ್ಲಿದ್ದ ಬಾಲಕನಿಗೆ ಎಚ್ಚರವಾಗಿದ್ದು, ಗಾಬರಿಗೊಂಡಿದ್ದಾನೆ. ಆದರೆ ಎಲ್ಲಿ ಕದಲಿದರೆ ಕಚ್ಚುತ್ತೂ ಎಂಬ ಭಯದಿಂದ ಕದಲದೇ ಮಲಗಿದ್ದಾನೆ. ಕಡೆಗೆ ದಿಕ್ಕುತೋಚದೆ ಜೋರಾಗಿ ಕಿರುಚಿಕೊಂಡಿದ್ದಾನೆ. ಆಗ ಮನೆಯಲ್ಲಿದ್ದವರು ಓಡಿ ಬಂದು ನೋಡಿ ಭಯಭೀತರಾಗಿದ್ದಾರೆ.

ಕೊನೆಗೆ ಹಾವು ಹಿಡಿಯುವ ವ್ಯಕ್ತಿಯನ್ನು ಕರೆಸಿದ್ದು, ಆತ ಬಹಳ ಜಾಣ್ಮೆಯಿಂದ ಹಾವನ್ನು ಡ್ರಾಯರ್ ನಿಂದ ಹೊರತೆಗೆದಿದ್ದಾನೆ. ಈ ಘಟನೆಯಲ್ಲಿ ಬಾಲಕನ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ. ಕಡೆಗೆ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.

ಇದರ ನಡುವೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ನೆಟಿಜನ್‌ಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ‘ಇದೇನಪ್ಪೋ .. ನಾವೀಗ ಇಂತಹ ದೃಶ್ಯ ನೋಡುತ್ತಿದ್ದೇವೆ’ ಎನ್ನುತ್ತಿದ್ದಾರೆ. ಈ ವೀಡಿಯೊ ಪ್ರಸ್ತುತ 76 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net