

ಬೆಂಗಳೂರು: ಟ್ರೆಕ್ಕಿಂಗ್‌ಗೆ ತೆರಳಿದ್ದ ಯುವಕನಿಗೆ ಆಘಾತಕಾರಿ ಅನುಭವವಾಗಿದೆ. ಪ್ಯಾಂಟ್ ಒಳಗೆ ಏರಿದ ಹಾವು ಆತ ಅದನ್ನು ಹಿಡಿದು ಎಸೆಯುವಷ್ಟರಲ್ಲಿ ಖಾಸಗಿ ಅಂಗಾಂಗವನ್ನು ಕಚ್ಚಿಹಿಡಿದಿದೆ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಸ್ಟರ್ ಫಿಶರ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಟ್ರೆಕ್ಕಿಂಗ್ ಹೋಗುತ್ತಿದ್ದ ಯುವಕನ ಪ್ಯಾಂಟ್‌ಗೆ ಹಾವೊಂದು ನುಗ್ಗಿದೆ. ಇದರಿಂದ ಆ ವ್ಯಕ್ತಿ ಆಘಾತಕ್ಕೊಳಗಾಗುತ್ತಾನೆ. ಹೇಗೋ ಕಷ್ಟ ಪಟ್ಟು ಹಾವನ್ನು ಹೊರ ತೆಗೆದಿದ್ದಾನೆ. ಆದರೆ ತಕ್ಷಣ, ಅದು ಆ ವ್ಯಕ್ತಿಯ ಖಾಸಗಿ ಭಾಗವನ್ನು ಕಚ್ಚಿ ಹಿಡಿದಿದೆ.
ಯುವಕ ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ಹಾವು ಸ್ವಲ್ಪ ಹೊತ್ತು ಹಾಗೆಯೇ ಕಚ್ಚಿ ಹಿಡಿದಿದೆ. ನೋವು ತಾಳಲಾರದೆ ಹೇಗೋ ಹಾವನ್ನು ಬಿಡಿಸಿಕೊಂಡು ಕಡೆಗೆ ಆ ಹಾವನ್ನು ದೂರ ಎಸೆಯುತ್ತಾನೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ವಿವರಗಳಿಲ್ಲ. ಆದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗಿದೆ.
ಇನ್ನು ವಿಡಿಯೋ ನೋಡಿದ ನೆಟ್ಟಿಗರು ಭಯಾನಕ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹಾವು ಕಚ್ಚಿಸಿಕೊಂಡವರು ಬದುಕಿದ್ದಾರಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು.. ಅಬ್ಬಾಬ್ಬಾ ಬ್ರೋ.. ಎಂದು ತಮಾಷೆಯ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ.