ತಂಬಾಕಿನಲ್ಲಿರುವ ನಿಕೋಟಿನ್​ ಕರೊನಾ ವೈರಸ್​ ಸೋಂಕು ವಿರುದ್ಧ ಹೋರಾಡುತ್ತದೆಯೇ?

nikotin april 24
Published on

ಪ್ಯಾರಿಸ್​: ತಂಬಾಕಿನಲ್ಲಿರುವ ನಿಕೋಟಿನ್​ ಧೂಮಪಾನಿಗಳಲ್ಲಿ ಕರೊನಾ ವೈರಸ್​ ಸೋಂಕು ತಗಲುವುದು ಕಡಿಮೆ ಎಂಬುದು ಆರಂಭಿಕ ಸಂಶೋಧನೆಯಲ್ಲಿ ಪತ್ತೆಯಾಗಿದೆ.

ಇದನ್ನೇ ಆಧಾರವಾಗಿಟ್ಟುಕೊಂಡು ನಿಕೋಟಿನ್​ ಕರೊನಾ ವೈರಸ್​ ಸೋಂಕನ್ನು ತಡೆಯುತ್ತದೆಯೇ ಎಂಬುದನ್ನು ಪೂರ್ಣ ಪ್ರಮಾಣದಲ್ಲಿ ಪತ್ತೆ ಮಾಡಲು ಫ್ರಾನ್ಸ್​ನ ಸಂಶೋಧಕರು ಈಗ ಮುಂದಾಗಿದ್ದಾರೆ.

ಪಿಟಿ ಸಾಲ್​ ಪೆಟ್ರಿಯೆರ್​ ಆಸ್ಪತ್ರೆಯ ಸಂಶೋಧಕರು, ಆಸ್ಪತ್ರೆಗೆ ದಾಖಲಾದ ರೋಗಿಗಳು ಹಾಗೂ ಸಾಮಾನ್ಯ ಜನರನ್ನು ನಿಕೋಟಿನ್​ ಸಂಶೋಧನೆಗೆ ಒಳಪಡಿಸಲು ಫ್ರೆಂಚ್​ ಸರ್ಕಾರದ ಅನುಮತಿಗೆ ಕಾಯುತ್ತಿದ್ದಾರೆ.

ಆಸ್ಪತ್ರೆಯ ಸಂಶೋಧಕರು ಧೂಮಪಾನಿಗಳಲ್ಲಿ ಕರೊನಾ ವೈರಸ್​ ಸೋಂಕು ತಗುಲುವುದು ಕಡಿಮೆ ಪ್ರಮಾಣವಾಗಿದೆ ಎಂಬುದನ್ನು ಈಗಾಗಲೇ ಸಂಶೋಧನೆಯಿಂದ ಪತ್ತೆ ಮಾಡಿದ್ದಾರೆ. ಧೂಮಪಾನಿಗಳಲ್ಲಿ ಸೋಂಕು ಹರಡಿದರೆ ಅವರಲ್ಲಿ ತೀವ್ರವಾದ ಪರಿಣಾಮ ಬೀರುವುದಿಲ್ಲ ಎಂಬುದನ್ನು ಕೂಡ ಕಂಡು ಹಿಡಿದಿದ್ದಾರೆ.

ಆದರೆ ಧೂಮಪಾನಿಗಳ ಮೇಲೆ ವೈರಸ್​ ತೀವ್ರವಾದ ಪರಿಣಾಮ ಬೀರುತ್ತದೆ ಎಂಬುದು ಇಲ್ಲಿವರೆಗಿನ ಸಂಶೋಧನೆಯಾಗಿದೆ. ಪ್ಯಾರಿಸ್​ ಸಂಶೋಧಕರ ಈ ಹೊಸ ಸಂಶೋಧನೆ ನಿಜವಾಗುತ್ತಾ ಕಾದು ನೋಡಬೇಕಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net