ಬಾಹ್ಯಾಕಾಶಕ್ಕೂ ತಲುಪಿತು ದೀಪಾವಳಿ ಪಟಾಕಿ ಹೊಗೆ! ಉತ್ತರ ಭಾರತವನ್ನು ಕಂಪ್ಲೀಟ್ ಮುಚ್ಚಿಹಾಕಿದೆ ಸ್ಮಾಗ್​! | Satellite Images Pollution India

Delhi Air Quality Diwali
ನಾಸಾ ಉಪಗ್ರಹ ಬಿಡುಗಡೆ ಮಾಡಿದ ಶಾಕಿಂಗ್ ಫೋಟೋ
Published on: 

Delhi Air Quality Post Diwali: ದೀಪಾವಳಿ ಹಬ್ಬದ ಕೇವಲ ಎರಡೇ ದಿನಕ್ಕೆ ಉತ್ತರ ಭಾರತದಲ್ಲಿ ತಾಪಮಾನ ಕುಸಿದು ವಿಷಕಾರಿ ಹೊಗೆ (Smog) ಆವರಿಸಿದೆ. ಬಾಹ್ಯಾಕಾಶದಿಂದಲೂ ಸ್ಪಷ್ಟವಾಗಿ ಗೋಚರಿಸುವಷ್ಟರ ಮಟ್ಟಿಗೆ ಭಾರತದ ಮೇಲಿನ ಮಾಲಿನ್ಯದ ಕವಚ ಭೀಕರವಾಗಿದೆ.

ನಾಸಾದ (NASA Worldview) ಉಪಗ್ರಹ ನವೆಂಬರ್ 10ರಂದು ತೆಗೆದ ಚಿತ್ರಗಳಲ್ಲಿ ಭಾರತದ ಹೆಚ್ಚಿನ ಭಾಗಗಳು ಬೂದು ಬಣ್ಣದ ದಪ್ಪ ಹೊಗೆಯಿಂದ ಮುಚ್ಚಿಹೋಗಿವೆ. ದೇಶದ ರಾಜಧಾನಿ ದೆಹಲಿ, ಉತ್ತರ ಪ್ರದೇಶದಿಂದ ಹಿಡಿದು ಉತ್ತರಾಖಂಡ, ಹಿಮಾಚಲ ಹಾಗೂ ಜಮ್ಮು-ಕಾಶ್ಮೀರದಂತಹ ಹಿಮಾಲಯನ್ ರಾಜ್ಯಗಳಿಗೂ ಈ ಮಾಲಿನ್ಯ ವ್ಯಾಪಿಸಿದೆ.

ದಕ್ಷಿಣ ಮತ್ತು ಮಧ್ಯ ಭಾರತದಲ್ಲೂ ಸಾಧಾರಣ ಪ್ರಮಾಣದ ಮಾಲಿನ್ಯ ಕಾಣಿಸಿಕೊಂಡಿದ್ದರೆ, ರಾಜಸ್ಥಾನ, ಗುಜರಾತ್ ಹಾಗೂ ಈಶಾನ್ಯ ರಾಜ್ಯಗಳು ಮಾತ್ರ ಈ ಹೊಗೆಯ ಪ್ರಭಾವದಿಂದ ಕೊಂಚ ಪಾರಾಗಿವೆ. ದೀಪಾವಳಿಯ ದಿನದಂದು ಸಿಡಿಸಿದ ಪಟಾಕಿಗಳ ಹೊಗೆ ಹಾಗೂ ತಾಪಮಾನ ಕುಸಿತದಿಂದಾಗಿ ಇಡೀ ವಾತಾವರಣ ನಂಜಾಗಿದೆ.

ಇದನ್ನೂ ಓದಿ: ರಾತ್ರಿ ನಾಯಿಗಳು ಅಳೋದು ದೆವ್ವ ನೋಡಿಯಾ? ಶ್ವಾನಗಳು ಕೂಗೋದರ ಹಿಂದಿದೆ ರೋಚಕ ಕಾರಣ! | Dogs Howl At Night

ಮತ್ತೊಂದೆಡೆ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ವರದಿ ಪ್ರಕಾರ ದೆಹಲಿಯಲ್ಲಿ ವಾಯು ಗುಣಮಟ್ಟ ಕೊಂಚ ಸುಧಾರಣೆ ಕಂಡಿದೆ. ಸೋಮವಾರ 376ರಷ್ಟಿದ್ದು 'ತೀವ್ರ ಕಳಪೆ' (Very Poor) ಮಟ್ಟದಲ್ಲಿದ್ದ ಎಕ್ಯೂಐ (AQI), ಮಂಗಳವಾರ ಗಾಳಿಯ ವೇಗ ಹೆಚ್ಚಿದ ಪರಿಣಾಮ 299ಕ್ಕೆ ಕುಸಿದು 'ಕಳಪೆ' (Poor) ವಿಭಾಗಕ್ಕೆ ತಲುಪಿದೆ