ಸ್ಟಾರ್ ಹೀರೋನ ಮಗ 13ನೇ ವಯಸ್ಸಿನಲ್ಲಿ ಡ್ರಗ್ಸ್ ಚಟಕ್ಕೆ ಬಿದ್ದ! ಈಗ ಬಹು ಬೇಡಿಕೆಯ ನಟ Prateik Babbar

prateikbabbar (1)
Published on

ಮುಂಬೈ: ಬಾಲಿವುಡ್ ನಟ, ಖ್ಯಾತ ನಟಿ ಸ್ಮಿತಾ ಪಾಟೀಲ್ ಮತ್ತು ನಟ ರಾಜ್ ಬಬ್ಬರ್ ಅವರ ಪುತ್ರ ಪ್ರತೀಕ್ ಬಬ್ಬರ್ ( Prateik Babbar ) ಚಿಕ್ಕ ವಯಸ್ಸಿನಲ್ಲೇ ಮಾದಕ ವ್ಯಸನದ ದಾಸರಾಗಿದ್ದೆ. ಇದ್ರಿಂದ ಹೊರಗೆ ಬಂದಿದ್ದು ಹೇಗೆ ಎನ್ನುವ  ಕುರಿತಾಗಿ ಅವರೇ ಸ್ವತಃ ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ನಟ ಈ ವಿಚಾರಕ್ಕೆ ಪ್ರತಿಕ್ರಿಯಿಸಿ ಡ್ರಗ್ಸ್ ಚಟಕ್ಕೆ ಬಿದ್ದಿದ್ದು ಹೇಗೆ ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರವಾಗಿ ಬಾಲಿವುಡ್‌ನಲ್ಲಿ ಹಲವು ವದಂತಿಗಳು ಹರಿದಾಡುತ್ತಿದ್ದು, ಚಲನಚಿತ್ರೋದ್ಯಮಕ್ಕೆ ಪ್ರವೇಶಿಸುವ ಮುಂಚೆಯೇ ಅವರ ಮಾದಕ ದ್ರವ್ಯ ಸೇವನೆಯು ಪ್ರಾರಂಭವಾಯಿತು ಎಂದು ಇತ್ತೀಚೆಗೆ ಬಹಿರಂಗಪಡಿಸಿದರು.

ಪ್ರತೀಕ್ ಬಬ್ಬರ್ ಮಾತನಾಡಿ, “ಹಲವು ವರ್ಷಗಳಿಂದ ನಾನು ಈ ಬಗ್ಗೆ ಮಾತನಾಡುತ್ತಿದ್ದೇನೆ, ಆದರೆ ಈ ವಿಷಯ ನಿಲ್ಲುತ್ತಿಲ್ಲ. ಸಿನಿಮಾದಲ್ಲಿ ತೊಡಗಿ ಹಣ ಸಂಪಾದಿಸಿ ನಂತರ ಡ್ರಗ್ಸ್ ಸೇವಿಸಲು ಆರಂಭಿಸಿದ ಎಂದು ಎಲ್ಲರೂ ಭಾವಿಸುತ್ತಾರೆ. ಅದು ನಿಜವಲ್ಲ. ನಾನು ಹದಿಮೂರು, ಹನ್ನೆರಡೂವರೆ ವರ್ಷದವನಿದ್ದಾಗ ಮಾದಕ ದ್ರವ್ಯ ಸೇವಿಸಿದೆ. ಅದಕ್ಕೆ ಚಿತ್ರರಂಗ ಕಾರಣವಲ್ಲ ಎಂದಿದ್ದಾರೆ.

ಅದಕ್ಕೆ ನನ್ನ ಕುಟುಂಬದ ಪರಿಸ್ಥಿತಿಯೇ ಕಾರಣ. ಡ್ರಗ್ಸ್ ನನ್ನ ಮತ್ತು ನನ್ನ ಕುಟುಂಬದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಈ ವಿಷಯದಲ್ಲಿ ನನ್ನನ್ನು ಬದಲಾಯಿಸಲು ನನ್ನ ಪ್ರೇಯಸಿ ಸಾಕಷ್ಟು ಸಹಾಯ ಮಾಡಿದರು...ಡ್ರಗ್ಸ್ ಕಥೆ ಮುಗಿದಿದೆ ಎಂದು ಪ್ರತೀಕ್ ಬಬ್ಬರ್ ಕ್ಲಾರಿಟಿ ನೀಡಿದ್ದಾರೆ.

ಈ ನಟ ಧೋಬಿ ಘಾಟ್, ದಮ್ ಮಾರೋ ದಮ್, ಆರಕ್ಷನ್, ಬಾಘಿ 2, ಮುಲ್ಕ್, ಚಿಚೋರ್, ಮುಂಬೈ ಸಾಗಾ, ಇಂಡಿಯಾ ಲಾಕ್‌ಡೌನ್‌ನಂತಹ ಚಲನಚಿತ್ರಗಳನ್ನು ಮಾಡಿದ್ದಾರೆ ಮತ್ತು ಉತ್ತಮ ಕ್ರೇಜ್ ಪಡೆದರು. ಸದ್ಯ ಅವರು ಬಾಲಿವುಡ್‌ನಲ್ಲಿ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net