ಪ್ರಯಾಣಿಕರನ್ನು ಹೊತ್ತೊಯುತ್ತಿದ್ದ AeroPlane ಪತನ; ತೀವ್ರಗೊಂಡ ರಕ್ಷಣಾ ಕಾರ್ಯಾಚರಣೆ

Flight
Published on

ನವದೆಹಲಿ: ಆರು ಜನರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನವೊಂದು (Aeroplane) ಪತನಗೊಂಡಿರುವ ವಿಚಾರ ಬೆಳಕಿಗೆ ಬಂದಿದ್ದು, ಘಟನೆಯು ಅಮೆರಿಕದ ಕೋಸ್ಟರಿಕಾದ ರಾಜಧಾನಿ ಸ್ಯಾನ್ ಜೋಸ್‌ನ ಆಗ್ನೇಯದಲ್ಲಿ ಸಂಭವಿಸಿದೆ. 

ನವೆಂಬರ್ 25ರ ಮಧ್ಯಾಹ್ನ ಕೋಸ್ಟರಿಕಾದ ರಾಜಧಾನಿ ಮೌಂಟ್ ಪಿಕೊ ಬ್ಲಾಂಕೊ ಬಳಿ ವಿಮಾನ (Aeroplane) ಪತನವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅಧಿಕಾರಿಗಳು ವಿಮಾನದ ಅವಶೇಷಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. 

ಈ ಬಗ್ಗೆ ಮಾತನಾಡಿರುವ ನಾಗರಿಕ ವಿಮಾನಯಾನ ಉಪನಿರ್ದೇಶಕ ಲೂಯಿಸ್ ಮಿರಾಂಡಾ, ಕೋಸ್ಟರಿಕಾದ ಉತ್ತರ ಕೆರಿಬಿಯನ್ ಕರಾವಳಿಯಲ್ಲಿರುವ ಟೋರ್ಟುಗುರೊದಿಂದ ವಿಮಾನವು ಟೇಕ್ ಆಫ್ ಆಗಿದ್ದು ಸ್ಯಾನ್ ಜೋಸ್‌ಗೆ ಹೋಗುತ್ತಿತ್ತು. ವಿಮಾನದ ಅವಶೇಷಗಳು ಪರ್ವತದ ತುದಿಯಲ್ಲಿ ಪತ್ತೆಯಾಗಿದೆ.

ಕೋಸ್ಟರಿಕಾದ ರೆಡ್‌ಕ್ರಾಸ್ ಸಂಸ್ಥೆಯ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಮಾನ ಪತ್ತೆಯಾಗಿದೆ. ಆದರೆ ಪ್ರಯಾಣಿಕರ ಸ್ಥಿತಿ ಅಥವಾ ಅವರ ಗುರುತಿನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಬಂದಿಲ್ಲ. ಇದೊಂದು ಲಘುಇ ವಿಮಾನವಾಗಿದ್ದು, ಕಡಿಮೆ ಅಂತರದ ಪ್ರಯಾಣಕ್ಕೆ ಬಳಸಲಾಗುತ್ತದೆ ಎಂದು ನಾಗರಿಕ ವಿಮಾನಯಾನ ಉಪನಿರ್ದೇಶಕ ಲೂಯಿಸ್ ಮಿರಾಂಡಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net