ಎತ್ತರದ ಕಟ್ಟಡಕ್ಕೆ ನೇರವಾಗಿ ಡಿಕ್ಕಿ ಹೊಡೆದ ವಿಮಾನ: ಭೀಕರ ದೃಶ್ಯ ಜಾಲತಾಣದಲ್ಲಿ ವೈರಲ್​! Plane Hits Tall Building

ಎತ್ತರದ ಕಟ್ಟಡಕ್ಕೆ ನೇರವಾಗಿ ಡಿಕ್ಕಿ ಹೊಡೆದ ವಿಮಾನ: ಭೀಕರ ದೃಶ್ಯ ಜಾಲತಾಣದಲ್ಲಿ ವೈರಲ್​! Plane Hits Tall Building
ಎತ್ತರದ ಕಟ್ಟಡಕ್ಕೆ ನೇರವಾಗಿ ಡಿಕ್ಕಿ ಹೊಡೆದ ವಿಮಾನ: ಭೀಕರ ದೃಶ್ಯ ಜಾಲತಾಣದಲ್ಲಿ ವೈರಲ್​! Plane Hits Tall Building
Published on

ಪ್ರಮುಖ ಮುಖ್ಯಾಂಶಗಳು

  • ಬೀಜಿಂಗ್‌ನಲ್ಲಿ ನಡುಕ ಹುಟ್ಟಿಸಿದ ಭೀಕರ ವಿಮಾನ ದುರಂತ
  • ಹಾರಾಡುತ್ತಿದ್ದಾಗಲೇ ದಿಕ್ಕು ತಪ್ಪಿ ಅಪಘಾತಕ್ಕೀಡಾದ ಲಘು ವಿಮಾನ
  • 1,700 ಅಡಿ ಎತ್ತರದ ಕಟ್ಟಡಕ್ಕೆ ನೇರವಾಗಿ ಡಿಕ್ಕಿ ಹೊಡೆದ ವಿಮಾನ
  • ಚೀನಾದ ರಾಜಧಾನಿ ಬೀಜಿಂಗ್​ನಲ್ಲಿ ನಡೆದ ಘಟನೆಯ ವಿಡಿಯೋ ವೈರಲ್​
Plane Hits Tall Building : ನಿಯಂತ್ರಣ ತಪ್ಪಿದ ವಿಮಾನವೊಂದು ಎತ್ತರದ ಕಟ್ಟಡಕ್ಕೆ ನೇರವಾಗಿ ಡಿಕ್ಕಿ ಹೊಡೆದಿರುವ ಆಘಾತಕಾರಿ ಘಟನೆ ಚೀನಾದ ರಾಜಧಾನಿ ಬೀಜಿಂಗ್​ನಲ್ಲಿ ನಡೆದಿದೆ.
ಡಿಕ್ಕಿಯ ರಭಸಕ್ಕೆ ವಿಮಾನವು ಹಲವು ಭಾಗಗಳಾಗಿದ್ದು, ಅದರ ಅವಶೇಷಗಳು ಕೆಳಗಿದ್ದ ವಾಹನಗಳ ಮೇಲೆ ಬಿದ್ದಿವೆ. ಅತ್ಯಂತ ಭೀಕರ ಹಾಗೂ ನಡುಕ ಹುಟ್ಟಿಸುವ ಈ ಇಡೀ ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ, ಸಣ್ಣ ವಿಮಾನವೊಂದು ತನ್ನ ನಿಗದಿತ ಹಾರಾಟದ ಮಾರ್ಗದಿಂದ ದಿಕ್ಕು ತಪ್ಪಿ, ಬೀಜಿಂಗ್‌ನ ಅತ್ಯಂತ ಎತ್ತರದ ಕಟ್ಟಡಕ್ಕೆ ನೇರವಾಗಿ ಡಿಕ್ಕಿ ಹೊಡೆದಿದೆ. ವೈರಲ್ ಆಗುತ್ತಿರುವ ವಿಡಿಯೋ ಮತ್ತು ಫೋಟೋಗಳ ಪ್ರಕಾರ, ಈ ಅಪಘಾತದಲ್ಲಿ 'ಸನ್‌ವರ್ಡ್ ಎಸ್‌ಎ 60ಎಲ್ ಅರೋರಾ' (Sunward SA 60L Aurora - ನೋಂದಣಿ ಸಂಖ್ಯೆ B-12PP) ಎಂಬ ಲಘು ವಿಮಾನವು ಅಪಘಾತಕ್ಕೀಡಾಗಿದೆ ಎಂದು ಹೇಳಲಾಗುತ್ತಿದೆ.
ಸುಮಾರು 1,700 ಅಡಿ ಎತ್ತರವಿರುವ ಪ್ರಸಿದ್ಧ 'ಚೀನಾ ಜುನ್' ಕಟ್ಟಡದ ಮೇಲ್ಭಾಗದಿಂದ ವಿಮಾನದ ಅವಶೇಷಗಳು ಕೆಳಗೆ ಬೀಳುತ್ತಿರುವುದು ಮತ್ತು ಕಟ್ಟಡದ ತಳಭಾಗದಿಂದ ದಟ್ಟವಾದ ಹೊಗೆ ಏಳುತ್ತಿರುವುದು ವೈರಲ್ ದೃಶ್ಯಗಳಲ್ಲಿ ಕಂಡುಬಂದಿದೆ. ಅಲ್ಲದೆ, ಘಟನಾ ಸ್ಥಳದಲ್ಲಿ ಅದರ ಬಿಡಿ ಭಾಗಗಳು ಎಲ್ಲೆಂದರಲ್ಲಿ ಸಿಕ್ಕಿಹಾಕಿಕೊಂಡಿರುವುದು ಮತ್ತು ಕಾರುಗಳ ಮೇಲೆ ಬಿದ್ದಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಈ ಭೀಕರ ಅಪಘಾತದಲ್ಲಿ ಎಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ ಅಥವಾ ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸಾವು-ನೋವುಗಳ ನಿಖರ ಸಂಖ್ಯೆಯ ಕುರಿತು ಇನ್ನು ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಚೀನಾ ಸರ್ಕಾರವಾಗಲಿ ಅಥವಾ ಅಲ್ಲಿನ ಉನ್ನತ ಅಧಿಕಾರಿಗಳಾಗಲಿ ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.
ಮತ್ತೊಂದೆಡೆ, ಪ್ರಮುಖ ಮಾಧ್ಯಮ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಮತ್ತು ಫೋಟೋಗಳ ನೈಜತೆಯನ್ನು ಸ್ವತಂತ್ರವಾಗಿ ಪರಿಶೀಲಿಸಿಲ್ಲ ಎಂದು ತಿಳಿಸಿವೆ. ಘಟನೆಯ ಸಂಪೂರ್ಣ ವಿವರಗಳು ಮತ್ತು ಅಪಘಾತಕ್ಕೆ ನಿಖರ ಕಾರಣ ಏನೆಂಬುದು ತನಿಖೆಯ ನಂತರವಷ್ಟೇ ಹೊರಬರಬೇಕಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net