ಚಿನ್ನದ ದರದಲ್ಲಿ ಅಲ್ಪ ಇಳಿಕೆ

Gold Rates
Published on

ನವದೆಹಲಿ: ಗ್ರಾಹಕರಿಂದ ಮತ್ತು ದೇಶೀಯ ಆಭರಣ ತಯಾರಿಕರಿಂದ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಇಲ್ಲಿಯ ಚಿನಿವಾರಪೇಟೆಯಲ್ಲಿ ಗುರುವಾರ ಚಿನ್ನ ಮತ್ತು ಬೆಳ್ಳಿಯ ದರ ಕೊಂಚ ಇಳಿಕೆ ದಾಖಲಿಸಿದವು. ಶೇ.99.9 ಶುದ್ಧತೆಯ 10 ಗ್ರಾಂ ಚಿನ್ನದ ದರವು 1,500 ರೂ. ಇಳಿಕೆಯಾಗಿ, 99,250 ರೂ.ಗೆ ತಲುಪಿತು.

ಬುಧವಾರ ಇದು 1,00,750 ರೂ. ಇತ್ತು. ಬೆಳ್ಳೆಯ ಬೆಲೆ ಕೆಜಿಗೆ 740 ರೂ. ಕಡಿಮೆಯಾಗಿ, 98,200 ರೂ.ಗೆ ತಲುಪಿದೆ. ಬುಧವಾರ ಇದು 98,940 ರೂ. ಇತ್ತು ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ತಲೆದೋರಿರುವ ಹಿನ್ನೆಲೆಯಲ್ಲಿ ಜನರು ಸುರಕ್ಷಿತ ಹೂಡಿಕೆಗಾಗಿ ಚಿನ್ನದತ್ತ ಮುಖ ಮಾಡಿದರೆ ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net