ಬೆಂಗಳೂರು:
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಮುಖ್ಯ ತಾಂತ್ರಿಕ ಸಲಹೆಗಾರರನ್ನಾಗಿ ಎನ್.ಪಿ.ಬಾಲರಾಜು ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿರುವ ಬೆನ್ನಲ್ಲಿಯೇ ಅವರ ಮೇಲೆ ನಡೆದಿರುವ ಲೋಕಾಯುಕ್ತ ದಾಳಿಯ ಬಗ್ಗೆ ಸರ್ಕಾರ ಮಾಹಿತಿ ಕೇಳಿದೆ.
ಲೋಕಾಯುಕ್ತ ನಡೆಸಿರುವ ದಾಳಿ ಮತ್ತು ದಾಖಲಿಸಿರುವ ಪ್ರಕರಣದ ಕುರಿತು ಆಗ ಮುಖ್ಯ ಇಂಜಿನೀಯರ್ ಆಗಿದ್ದ ಎನ್.ಪಿ.ಬಾಲರಾಜು ಅವರಿಂದ ಸಹಿ ಧೃಢೀಕೃತವಾದ ಮಾಹಿತಿ ಪಡೆದು ಅದನ್ನು ಪರಿಶೀಲನೆ ಮಾಡಿ ಅದಕ್ಕೆ ಸಂಬಂದಿಸಿದ ಮೂಲ ದಾಖಲಾತಿಗಳ ಜೊತೆಗೆ ಲೋಕಾಯುಕ್ತಕ್ಕೆ ಮಾಹಿತಿ ಕಳುಹಿಸಿಕೊಡಬೇಕು ಎಂದು ವಸತಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರು, ವಸತಿ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.