ಪ್ರವಾಸಿಗರಿಗಾಗಿ ತೆರೆದಿದೆ ವಿಶ್ವದ ಅತಿ ಉದ್ಧದ ತೂಗು ಸೇತುವೆ!

Longest Bridge
Published on

ಝೆಕ್​​(ಯೂರೋಪ್​): ವಿಶ್ವದ ಅತಿ ಉದ್ಧದ ತೂಗು ಸೇತುವೆ ಸಿದ್ಧಗೊಂಡಿದ್ದು, ಸಾವಿರಾರು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಇನ್ನು ಆಕರ್ಷಕವಾಗಿರುವ ಈ ಸೇತುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. 

ಯುರೋಪ್​ನ ಝೆಕ್​ ರಿಪಬ್ಲಿಕನ್​ ದೇಶದಲ್ಲಿ ನಿರ್ಮಾಣಗೊಂಡಿರುವ ಈ ಸೇತುವೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬ್ರಿಡ್ಜ್​ ನಿರ್ಮಾಣಕ್ಕೆ ಸತತ ಎರಡು ವರ್ಷಗಳ ಕಾಲ ಸಮಯ ತೆಗೆದುಕೊಳ್ಳಲಾಗಿದ್ದು, ಸದ್ಯ ಇದೀಗ ಪ್ರವಾಸಿಗರಿಗಾಗಿ ತೆರೆದಿದ್ದು, ಇಲ್ಲಿ ಭೇಟಿ ನೀಡಿದ ಪ್ರವಾಸಿಗರು ಕಣ್ತುಂಬಿಕೊಂಡು, ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


ಇದರ ಹೆಸರು ಸ್ಕೈ ಬ್ರಿಡ್ಜ್​ 721 ಒಂದು ಬೆಟ್ಟದ ತುದಿಯಿಂದ ಮತ್ತೊಂದು ಬೆಟ್ಟದ ತುದಿವರೆಗೂ ಮೇಲ್ಸೇತುವೆ ನಿರ್ಮಾಣ ಮಾಡಿರುವುದು ಭಾರೀ ಆಕರ್ಷಣೆಗೆ ಕಾರಣವಾಗಿದೆ.

ಎರಡು ಬೆಟ್ಟಗಳ ನಡುವಿನ 95 ಮೀಟರ್​​ (312 ಅಡಿ) ಉದ್ದದಲ್ಲಿ ಕೇಬಲ್​ ಕಾರ್​ ಅಳವಡಿಸಲಾಗಿದ್ದು, ಈ ಬ್ರಿಡ್ಜ್​ 721 ಮೀ. ಅಂದರೆ 2365 ಅಡಿ ಉದ್ಧವಿದೆ.1.2 ಮೀ.ಅಗಲ ಹೊಂದಿದೆ. ಪ್ರವಾಸಿಗರು 1125 ಮೀ.ಎತ್ತರದಲ್ಲಿ ಪ್ರವೇಶಿಸಿದರೆ, 10 ಮೀ.ಎತ್ತರಕ್ಕೆ ಬಂದು ನಿರ್ಗಮಿಸುತ್ತಾರೆ.

ಇದೇ ಮೊದಲ ಬಾರಿಗೆ ಎರಡು ಬೆಟ್ಟಗಳ ನಡುವೆ ಸೇತುವೆ ನಿರ್ಮಾಣವಾಗಿದ್ದು, ಇಡೀ ಅರಣ್ಯವನ್ನೇ ಈ ಸೇತುವೆ ಮೇಲ್ಭಾಗದಿಂದ ನೋಡಿ ಕಣ್ತುಂಬಿಕೊಳ್ಳಬಹುದು. ಆದರೆ ಇದು ಇರುವುದು ಯುರೋಪ್​ನಲ್ಲಿ ಯುರೋಪ್​ ಪ್ರವಾಸ ಕೈಗೊಂಡರೆ ಈ ಮೇಲ್ಸೇತುವೆ ಮೇಲೆ ನಡೆದಾಡಬಹುದು.

ಈ ಸೇತುವೆ ನಿರ್ಮಿಸಲು 200 ಮಿಲಿಯನ್​​​ ಕ್ರೌನ್ಸ್​​ ಅಂದರೆ 8.4 ಮಿಲಿಯನ್​ ಡಾಲರ್ ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ. ಸದ್ಯ ನೇಪಾಳದ ಬಾಗಲೂಂಗ್​ ಪರ್ಬತ್​ ಬ್ರಿಡ್ಜ್​ ವಿಶ್ವದ ಅತಿ ಉದ್ದದ ಸೇತುವೆ ಎಂದು ಗಿನ್ನಿಸ್​ ದಾಖಲೆ ಬರೆದಿತ್ತು. ಇದೀಗ ಈ ಮೇಲ್ಸೇತುವೆ ಇದನ್ನು ಸರಿಗಟ್ಟಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net