

ಚೆನ್ನೈ: ವಿಷಯ ಯಾವುದೇ ಇರಲಿ.. ಪ್ರತಿಭಟನೆ ಮಾಡುವಾಗ ಸಾಮಾನ್ಯವಾಗಿ ಕೈಯಲ್ಲಿ ಪ್ರಕಾರ್ಡ್ ಹಿಡಿದುಕೊಂಡು ಘೋಷಣೆಗಳನ್ನು ಕೂಗಲಾಗುತ್ತದೆ. ಆದರೆ ಇಲ್ಲೊಂದು ವಿನೂತನ ರೀತಿಯ ಪ್ರತಿಭಟನೆ ನಡೆದಿದೆ. ಅದಕ್ಕೆ ಕಾರಣ ತಲೆಬರುಡೆ.
ಸಂಸತ್ತಿನಲ್ಲಿ ಇತ್ತೀಚೆಗೆ ಮೂರು ಕಾಯ್ದೆಗಳ ತಿದ್ದುಪಡಿ ಅಂಗೀಕಾರವಾದ ಹಿನ್ನೆಲೆಯಲ್ಲಿ ದೇಶದ ಹಲವೆಡೆ ಪ್ರತಿಭಟನೆಗಳು ಆಗುತ್ತಿವೆ. ಹಾಗೇ ಚೆನ್ನೈನಲ್ಲೂ ರೈತರ ಜತೆಗೆ ಇತರ ಸಂಘಟನೆಗಳವರೂ ಸೇರಿ ಪ್ರತಿಭಟನೆ ನಡೆಸಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿ, ಧರ್ಮಗಿರಿ, ತಿರುಪ್ಪುರ್, ನಾಗಪಟ್ಟಿನಂ ಹಾಗೂ ನಮಕ್ಕಲ್ ಜಿಲ್ಲೆಗಳಲ್ಲೂ ಈ ಕುರಿತ ಪ್ರತಿಭಟನೆಗಳು ನಡೆದಿವೆ. ಅದರಲ್ಲೂ ತಮಿಳುನಾಡು ರೈತರ ಸಂಘದ ಅಧ್ಯಕ್ಷ ಪಿ. ಅಯ್ಯಕನ್ನು ನೇತೃತ್ವದಲ್ಲಿ ತಿರುಚಿಯಲ್ಲಿ ನಡೆದ ಪ್ರತಿಭಟನೆ ವೇಳೆ ಕೆಲವರ ಕೈಯಲ್ಲಿ ತಲೆಬುರುಡೆಗಳು ಇದ್ದಿದ್ದು ಗಮನ ಸೆಳೆಯಿತು. (ಏಜೆನ್ಸೀಸ್)