

ಕೋಲಾರ: ಧರ್ಮಸ್ಥಳ ಸಂಸ್ಥೆಯು ಲಾಭದ ಆಪೇೆ ಇಲ್ಲದೆಯೇ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಜನಸಾಮಾನ್ಯರ ಕಷ್ಟ-ಸುಖಗಳಲ್ಲಿ ಭಾಗಿಯಾಗಿ, ಮಾದರಿ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ ಎಂದು ಸಮಾಜ ಸೇವಕ ಹಾಗೂ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ತ್ಯಾವನಹಳ್ಳಿಯಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ಫಲಾನುಭವಿ ಸೋಮಶೇಖರ ಆಚಾರಿ ಅವರಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಿ ಮಾತನಾಡಿದ ಅವರು, ಧರ್ಮಸ್ಥಳ ಸಂಸ್ಥೆಯಿಂದ ಶಿಣ ಹಾಗೂ ವಸತಿ ಸೇರಿ ವಿಶೇಷವಾಗಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಲು, ಸ್ವಸಹಾಯ ಗುಂಪುಗಳನ್ನು ರಚಿಸಿ ಸಾಲ&ಸೌಲಭ್ಯಗಳನ್ನು ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕಿರು ಸರ್ಕಾರವಾಗಿ ಸಂಸ್ಥೆಯು ಜನಪರ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದು ಶ್ರೀನಾಥ್ ಬಣ್ಣಿಸಿದರು.
ಸಮಾಜದಲ್ಲಿನ ಅಶಕ್ತರು, ನಿರಾಶ್ರಿತರು, ನಿರ್ಗತಿಕರಿಗೆ ಪೋಷಕರ ಮಾದರಿಯಲ್ಲಿ ವಸತಿ ಸೌಲಭ್ಯವನ್ನು ಧರ್ಮಸ್ಥಳ ಸಂಸ್ಥೆ ಕಲ್ಪಿಸಿದೆ. ವೃದ್ಧಾಪ್ಯ ವೇತನ, ಆಧಾರ, ಪಡಿತರ ಚೀಟಿ ಸೇರಿ ನೆಮ್ಮದಿಯ ಬದುಕಿಗೆ ಪೂರಕವಾದ ಸೌಲಭ್ಯಗಳನ್ನು ಸಂಸ್ಥೆ ಕಲ್ಪಿಸಿದೆ. ಇದು ಸೇವಾ ಕಾರ್ಯ ಎಂಬುವುದಕ್ಕಿಂತ ದೇವತಾ ಕಾರ್ಯವೆಂದು ಕರೆಯುವುದೇ ಉತ್ತಮ ಎಂದರು.
ಇಂಥಹ ಧಾರ್ಮಿಕ ಸಂಸ್ಥೆಯ ವಿರುದ್ಧ ಕೆಲವರು ಅಪಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು ವಿಷಾಧನೀಯ ಎಂದು ಶ್ರೀನಾಥ್ ಬೇಸರ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಹಾಗೂ ಜಿಲ್ಲಾ ಭಾರತ ಸೇವಾದಳ ಅಧ್ಯ ಕೆ.ಎಸ್.ಗಣೇಶ್, ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ಸಿ.ಎಚ್.ಪದ್ಮಯ್ಯ, ಯೋಜನಾಧಿಕಾರಿ ಸಿದ್ದಗಂಗಯ್ಯ, ಸದಸ್ಯೆ ಶಾಂತಮ್ಮ, ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಪ್ಪ ರಾಷ್ಟ್ರ ಪ್ರಶಸ್ತಿ ವಿಜೇತ ಶಿಲ್ಪಿ ವಿ.ಪೂರ್ಣಚಂದ್ರ ಆಚಾರಿ, ಸಮನ್ವಯಾಧಿಕಾರಿ ಸೌಮ್ಯ, ಕೋಲಾರ ತಾಲೂಕು ಧರ್ಮಸ್ಥಳ ಸಂಸ್ಥೆ ಕೃಷಿ ಮೇಲ್ವಿಚಾರಕ ವಿಜಯಕುಮಾರ್ ಹಾಜರಿದ್ದರು.