ರೈಲು ಇಳಿದು ಹಳಿ ದಾಟುವಾಗ ಮತ್ತೊಂದು ಎಕ್ಸ್​ಪ್ರೆಸ್ ರೈಲು ಡಿಕ್ಕಿ; ಆರು ಮಹಿಳೆಯರು ಸಾವು| Train Accident

ವಿಜಯವಾಣಿ - 2025-11-05T124701.004
Published on

StartFragment ಮಿರ್ಜಾಪುರ: ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಚುನಾರ್ ರೈಲು ನಿಲ್ದಾಣದಲ್ಲಿ ಇಂದು(ನ. 05) ರೈಲಿನ ತಪ್ಪು ಭಾಗದಲ್ಲಿ ಇಳಿದು ಹಳಿ ದಾಟುವಾಗ ಮತ್ತೊಂದು ಎಕ್ಸ್​ಪ್ರೆಸ್ ರೈಲು ಡಿಕ್ಕಿ ಹೊಡೆದು(Train Accident) ಆರು ಮಹಿಳೆಯವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಮಾಹಿತಿ ಪಿಟಿಐಗೆ ನೀಡಿರುವ ಎನ್‌ಸಿಆರ್ ಪ್ರಯಾಗ್‌ರಾಜ್ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮಿತ್ ಸಿಂಗ್,  ಚೋಪನ್ ಎಕ್ಸ್‌ಪ್ರೆಸ್ ನಾಲ್ಕನೇ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿತ್ತು. ಅದರಲ್ಲಿಂದ ಇಳಿದ ಪ್ರಯಾಣಿಕರು ಪಾದಚಾರಿ ಸೇತುವೆಯನ್ನು ಬಳಸುವ ಬದಲು, ಕೆಲವರು ನೇರವಾಗಿ ಹಳಿಗಳ ಮೇಲೆ ಇಳಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಹಳಿಯವನ್ನು ದಾಟುವಾಗ ನೇತಾಜಿ ಎಕ್ಸ್‌ಪ್ರೆಸ್ ರೈಲು ಅವರ ಮೇಲೆ ಹರಿದಿದೆ ಎಂದು ತಿಳಿಸಿದ್ದಾರೆ. 

ಇನ್ನೂ ಘಟನೆ ಕುರಿತಂತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್, ತೀವ್ರ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಕೂಡಲೇ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ತಲುಪಿ ರಕ್ಷಣಾ ಮತ್ತು ಪರಿಹಾರ ಕಾರ್ಯ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net