

ಉತ್ತರ ಪ್ರದೇಶ: ( Foetus Stuck In Toilet ) ಗಾಜಿಯಾಬಾದ್ನಲ್ಲಿ ಭಾನುವಾರ ಮನೆಯೊಂದರ ಟಾಯ್ಲೆಟ್ ಪೈಪ್ನಲ್ಲಿ ಸಿಲುಕಿಕೊಂಡಿದ್ದ ಆರು ತಿಂಗಳ ಭ್ರೂಣವೊಂದು ಪತ್ತೆಯಾಗಿದೆ.
ಮನೆಯಲ್ಲಿ ಒಂಬತ್ತು ಬಾಡಿಗೆದಾರರು ವಾಸಿಸುತ್ತಿದ್ದಾರೆ. ಬೆಳಗ್ಗೆ ಪೈಪ್ನಲ್ಲಿ ನೀರು ನಿಂತಿದ್ದರಿಂದ ಪೈಪ್ ಕಟ್ ಆಗಿದ್ದು, ಪೈಪ್ನಲ್ಲಿ ಭ್ರೂಣ ಸಿಕ್ಕಿಹಾಕಿಕೊಂಡಿರುವುದು ಕಂಡುಬಂದಿದೆ.ಮನೆಯ ಮಾಲೀಕ ದೇವೇಂದ್ರ ಅಲಿಯಾಸ್ ದೇವ ಎಂಬಾತ ಪೈಪ್ ಒಡೆದು ಭ್ರೂಣವನ್ನು ಹೊರತೆಗೆದಿದ್ದಾನೆ. ಮಾಹಿತಿ ಪಡೆದ ಇಂದಿರಾಪುರಂ ಪೊಲೀಸರು ಸ್ಥಳಕ್ಕಾಗಮಿಸಿ ಮಾಲೀಕರನ್ನು ವಿಚಾರಣೆ ನಡೆಸಿದ್ದಾರೆ.
ಶೌಚಾಲಯದ ಪೈಪ್ನಲ್ಲಿ 6 ತಿಂಗಳ ಭ್ರೂಣವು ಸಿಲುಕಿಕೊಂಡಿದೆ. ಇದರಿಂದ ಪೈಪ್ ಒಡೆದು ನೀರು ಹೊರ ಬೀಳಲಾರಂಭಿಸಿತ್ತು. ಯಾರು ಅಪರಾಧ ಮಾಡಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಾಡಿಗೆದಾರರ ಡಿಎನ್ಎಯನ್ನು ಭ್ರೂಣದ ಡಿಎನ್ಎಯೊಂದಿಗೆ ಹೊಂದಿಸಲಾಗುವುದು ಎಂದು ಇಂದಿರಾಪುರಂ ಸಹಾಯಕ ಪೊಲೀಸ್ ಕಮಿಷನರ್ ಸ್ವತಂತ್ರ ಕುಮಾರ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.
ನಂತರ ಪೊಲೀಸರು ಮನೆ ಮಾಲೀಕರು ಮತ್ತು ಮನೆಯಲ್ಲಿ ವಾಸಿಸುತ್ತಿದ್ದ ಬಾಡಿಗೆದಾರರನ್ನು ವಿಚಾರಣೆಗೆ ಒಳಪಡಿಸಿದರು. ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ, ಭ್ರೂಣವನ್ನು ಸುರಕ್ಷಿತವಾಗಿ ಇರಿಸಲಾಗಿದೆ.