ಬೇ ಹಾರ್ಸ್​​ ಗಣಿ ಕುಸಿದು ಜಿಂಬಾಬ್ವೆಯಲ್ಲಿ ಆರು ಮಂದಿ ಸಾವು..! ಭರದಿಂದ ಸಾಗಿದ ರಕ್ಷಣಾ ಕಾರ್ಯ

zz
Published on

ಜಿಂಬಾಬ್ವೆ(ಸೆ.29): ಜಿಂಬಾಬ್ವೆಯ ರಾಜಧಾನಿ ಹರಾರೆಯಿಂದ ಪಶ್ಚಿಮಕ್ಕೆ 100 ಕಿಲೋಮೀಟರ್ ದೂರದಲ್ಲಿರುವ ಬೇ ಹಾರ್ಸ್ ಗಣಿಯಲ್ಲಿ ನೆಲ ಕುಸಿದು ಆರು ಗಣಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.


ಶುಕ್ರವಾರ ರಾತ್ರಿಯ ವೇಳೆಗೆ ಆರು ಮೃತದೇಹಗಳನ್ನು ಗಣಿಯಿಂದ ಹೊರತೆಗೆಯಲಾಗಿದ್ದು, ಇನ್ನೂ 15 ಗಣಿ ಕಾರ್ಮಿಕರ ರಕ್ಷೆಣೆಗಾಗಿ ಪ್ರಯತ್ನಗಳು ನಡೆಯುತ್ತಿವೆ.


ZBC TVಯ ಮಾಹಿತಿಯ ಪ್ರಕಾರ, ವೇಳೆಗೆ ಆರು ಮೃತದೇಹಗಳನ್ನು ಗಣಿಯಿಂದ ಹೊರತೆಗೆಯಲಾಗಿದ್ದು ಇನ್ನೂ 15 ಗಣಿ ಕಾರ್ಮಿಕರು ಮಣ್ಣಿನ ಒಳಗೆ ಸಿಕ್ಕಿದ್ದು ಅವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.


ಗಣಿ ಕುಸಿದ ಪರಿಣಾಮ 34 ಮಂದಿ ಸಿಲುಕಿದ್ದು, 13 ಮಂದಿ ತಪ್ಪಿಸುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಾರೆಯಾಗಿ 21 ಮಂದಿ ನೆಲದಲ್ಲಿ ಸಿಲುಕಿಕೊಂಡಿದ್ದರು.


ಯಾವ ರೀತಿ ಘಟನೆ ನಡೆದಿದೆ ಅನ್ನೋದನ್ನ ಪರಿಶೀಲಿಸಲು, ಜಿಂಬಾಬ್ವೆ ಮೈನರ್ಸ್ ಫೆಡರೇಶನ್​ನ ಕಾರ್ಯದರ್ಶಿ ಮತ್ತು ಚೆಗುಟು ಮೈನರ್ಸ್ ಅಸೋಸಿಯೇಶನ್ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆಂದು, ಜಿಂಬಾಬ್ವೆ ಮೈನರ್ಸ್ ಫೆಡರೇಶನ್​ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net