

ಚೆನ್ನೈ : ಲಾಕ್ಡೌನ್ನಿಂದಾಗಿ ಮದ್ಯ ಮಾರಾಟ ನಿಂತಿರುವ ತಮಿಳುನಾಡಿನಲ್ಲಿ, ಯಥೇಚ್ಛವಾಗಿ ಸಿಗುತ್ತಿರುವ ಹ್ಯಾಂಡ್ ಸ್ಯಾನಿಟೈಸರ್ನಿಂದ ಹೆಂಡ ತಯಾರಿಸುವ ಪ್ರಯತ್ನ ಮಾಡಿದ್ದಾರೆ. ರಾಜ್ಯದ ಕುಡ್ಡಲೋರ್ ಜಿಲ್ಲೆಯ ರಾಮನಾಥನ್ ಕುಪ್ಪಂ ಎಂಬಲ್ಲಿ ಈ ಪ್ರಸಂಗ ನಡೆದಿದ್ದು, ಈ ಸಂಬಂಧ 6 ಜನರನ್ನು ಬಂಧಿಸಲಾಗಿದೆ.
ನಿನ್ನೆ ಸಿಕ್ಕ ಖಚಿತ ಮಾಹಿತಿಯ ಪ್ರಕಾರ ಕುಡ್ಡಲೋರ್ ಪೊಲೀಸರು ನಡೆಸಿದ ದಾಳಿಯಲ್ಲಿ ಆರು ಜನ ಸ್ಯಾನಿಟೈಸರ್ನಿಂದ ಅಕ್ರಮವಾಗಿ ಆಲ್ಕೊಹಾಲ್ ಉತ್ಪಾದಿಸುವ ಪ್ರಯತ್ನದಲ್ಲಿದ್ದುದು ಬೆಳಕಿಗೆ ಬಂದಿದೆ. ಆರೋಗ್ಯ ಇಲಾಖೆಯವರ ತಪಾಸಣೆಯ ನಂತರ ಆರೋಪಿಗಳು ಉಪಯೋಗಿಸುತ್ತಿದ್ದ ಕಚ್ಚಾ ಸಾಮಗ್ರಿ ಸ್ಯಾನಿಟೈಸರೇ ಎಂದು ಖಾತ್ರಿಯಾಗಿದೆ.
ಆರೋಪಿಗಳಿಂದ 300 ಲೀಟರ್ ಹ್ಯಾಂಡ್ ಸ್ಯಾನಿಟೈಸರ್, ಖಾಲಿ ಬಾಟಲಿಗಳು ಮತ್ತು ಒಂದು ಟಾಟಾ ಏಸ್ ವಾಹನವನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ತಮಿಳುನಾಡು ಸರ್ಕಾರ ಮೇ 24 ರವರೆಗೆ ರಾಜ್ಯಾದ್ಯಂತ ಸಂಪೂರ್ಣ ಲಾಕ್ಡೌನ್ ವಿಧಿಸಿದ್ದು, ಟಾಸ್ಮಾಕ್ ಎಂದು ಕರೆಯಲ್ಪಡುವ ಸರ್ಕಾರಿ ಮದ್ಯದಂಗಡಿಗಳೂ ಮುಚ್ಚಲ್ಪಟ್ಟಿವೆ ಎನ್ನಲಾಗಿದೆ. (ಏಜೆನ್ಸೀಸ್)