ಸಣ್ಣಣ್ಣ ಈ ಬಾರಿ ನಿನಗೆ ರಾಖಿ ಕಟ್ಟಲಾಗಲ್ಲ, ಹುಷಾರು ಎಂದು ಡೆತ್​ನೋಟ್ ಬರೆದು ತಂಗಿ ಆತ್ಮಹತ್ಯೆ| Suicide

Vidya Suicide
Published on

Suicide: ಸಣ್ಣಣ್ಣ ನಾನು ಈ ಬಾರಿ ರಾಖಿ ಕಟ್ಟಲಾಗಲ್ಲ, ಹುಷಾರಾಗಿರುವ ಎಂದು ಮದುವೆಯಾಗಿ 6 ತಿಂಗಳಿಗೆ ವಿವಾಹಿತ ಮಹಿಳೆಯೊಬ್ಭಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲುಕುವ ಘಟನೆ ಸೋಮವಾರ(ಆಗಸ್ಟ್​ 4) ವರದಿಯಾಗಿದೆ.

ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಶ್ರೀವಿದ್ಯಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಾಲೇಜು ಉಪನ್ಯಾಸಕಿಯಾಗಿದ್ದ ಶ್ರೀವಿದ್ಯಾ, ಗ್ರಾಮ ಸರ್ವೇಯರ್ ಆಗಿದ್ದ ರಾಂಬಾಬು ಅವರನ್ನು 6 ತಿಂಗಳ ಹಿಂದೆ ಮದುವೆಯಾಗಿದ್ದರು ಎನ್ನಲಾಗಿದೆ.

"ತಮ್ಮ ಮದುವೆ ಆದ ಒಂದು ತಿಂಗಳಿನಲ್ಲೇ ಕ್ರೂರವಾದ ಕೌಟುಂಬಿಕ ದೌರ್ಜನ್ಯ ಎದುರಿಸುತ್ತಿದ್ದೆ, ಪತಿ ರಾಂಬಾಬು ಪ್ರತಿದಿನ ಕುಡಿದು ಬಂದು ದೈಹಿಕವಾಗಿ ಹಿಂಸಿಸುತ್ತಿದ್ದ, ಮಾತಿನಿಂದ ನಿಂದಿಸುತ್ತಿದ್ದನು. ಇನ್ನೊಬ್ಬ ಮಹಿಳೆ ಜೊತೆ ನನ್ನನ್ನು ಹೋಲಿಸಿ ಅಪಹಾಸ್ಯ ಮಾಡ್ತಿದ್ದ. ಬೆಡ್​ಗೆ ನನ್ನ ತಲೆಯನ್ನು ಹಿಡಿದು ಗುದ್ದಿ ಹಿಂಸಿಸುತ್ತಿದ್ದ. ಈ ನಿರಂತರ ಹಿಂಸೆ ತಾಳಲಾರದೆ ಕಠಿಣ ನಿರ್ಧಾರ ತೆಗೆದುಕೊಳ್ತಿದ್ದೇನೆ" ಎಂದು ಡೆತ್​ನೋಟ್​ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net