ನೆಪ ಹೇಳುವ ಯುವಕರಿಗೆ ಸರ್‌ಎಂವಿ ಆದರ್ಶ

Visvesvaraya Birthday Celebration
ನಗರದ ಎಸ್‌ಪಿಎಂ ರಸ್ತೆಯ ಟಿಎಂಎಇ ಕೈಗಾರಿಕಾ ಸಂಸ್ಥೆಯಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆಯನ್ನು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಉದ್ಘಾಟಿಸಿದರು. ಜಿ.ವಿ.ಸಂಗಮೇಶ್ವರ, ಪ್ರಸನ್ನಕುಮಾರ್ ಸ್ವಾಮಿ, ಡಿ.ಗಣೇಶ್, ಇಂದಿರಾ ಪ್ರಕಾಶ್ ಇದ್ದರು.
Published on

ಶಿವಮೊಗ್ಗ: ಪ್ರತಿಯೊಬ್ಬರೂ ವಿಶ್ವೇಶ್ವರಯ್ಯ ಅವರಂತೆ ಬುದ್ಧಿವಂತಿಕೆ, ಶ್ರದ್ಧೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಯಶಸ್ಸು ಕಾಣಬೇಕೆಂದು ಹಿರಿಯ ಸಾಹಿತಿ ಜಿ.ವಿ.ಸಂಗಮೇಶ್ವರ ಅಭಿಪ್ರಾಯಪಟ್ಟರು.

ನಗರದ ಎಸ್‌ಪಿಎಂ ರಸ್ತೆಯ ಟಿಎಂಎಇ ಕೈಗಾರಿಕಾ ಸಂಸ್ಥೆಯಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಅಂಗವಾಗಿ ತಾಂತ್ರಿಕತೆಯ ಮಾಂತ್ರಿಕ ವಿಚಾರ ಕುರಿತು ಅವರು ಮಾತನಾಡಿದರು.
ಬ್ರಿಟಿಷರ ಕಾಲದಲ್ಲಿ ಭಾರತದ ಕಸಬುದಾರರನ್ನು ನಾಶ ಮಾಡಿದ್ದರ ಕಾರಣ ಕಬ್ಬಿಣ ಮಾಡುವ ತಂತ್ರವನ್ನು ಅಳವಡಿಸಿಕೊಂಡರು. ಅವರು ಸಿವಿಲ್ ತಂತ್ರಜ್ಞಾನ ಪಡೆದಿದ್ದರು. ಅವರ ಕಲಿಕೆಯ ಆಸಕ್ತಿ ಎಲ್ಲವನ್ನೂ ಯಶಸ್ಸು ಮಾಡಿಕೊಂಡರು. ತಮಗೆ ವಹಿಸಿದ ಕೆಲಸಕ್ಕೆ ಬೆನ್ನು ತೋರಿಸದೆ ಸಾಧಿಸಿದರು. ನೆಪ ಹೇಳುವ ಇವತ್ತಿನ ಯುವಕರಿಗೆ ಅವರು ಆದರ್ಶವಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ, ಸರ್‌ಎಂವಿ ಅವರು ಇವತ್ತಿನ ತಾಂತ್ರಿಕ ವ್ಯವಸ್ಥೆಗೆ, ಯುವಜನರ ಬದುಕಿಗೆ ಮಾದರಿಯಾಗಿದ್ದಾರೆ. ಅವರ ನೆನಪು ಮತ್ತೆ ಮತ್ತೆ ಮಾಡಿಕೊಳ್ಳವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರಸನ್ನಕುಮಾರ್ ಸ್ವಾಮಿ, ಶ್ರೇಷ್ಠ ವ್ಯಕ್ತಿತ್ವದ ಅವಲೋಕನ ಅಗತ್ಯವಾಗಿದೆ. ಶ್ರದ್ಧೆ, ಭಕ್ತಿ ಅಂದರೇನು ಎಂಬುದನ್ನು ಅರಿಯಲು ಈ ಕಾರ್ಯಕ್ರಮ ಉಪಯುಕ್ತವಾಗಿದೆ ಎಂದರು. ಕಾರ್ಯದರ್ಶಿ ಡಿ.ಗಣೇಶ್, ಕವಿ ಇಂದಿರಾ ಪ್ರಕಾಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net