

ಕೋಲಾರ: ಜಿಲ್ಲೆಯ ರೈತರಿಗೆ ಕಾಲಕ್ಕೆ ತಕ್ಕಂತೆ ತರಬೇತಿ ನೀಡಿದರೆ ಮತ್ತಷ್ಟು ಸಾಧನೆ ಮಾಡಲು ಮುಂದಾಗುತ್ತಾರೆ. ಅವರನ್ನು ದೇಶಕ್ಕೆ ಮಾದರಿಯಾಗುವ ರೈತರನ್ನಾಗಿ ಇಲಾಖಾಧಿಕಾರಿಗಳು ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕೃಷಿಕ ಸವಾಜದ ಸಹಯೋಗದಲ್ಲಿ ಗುರುವಾರ ಜಿಲ್ಲಾ ತೋಟಗಾರಿಕೆ ನರ್ಸರಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಿರಿಧಾನ್ಯ ಮತ್ತು ಸಾವಯುವ ಮೇಳ ಹಾಗೂ ಫಲಪುಷ್ಪ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಂದಿನ ಪೀಳಿಗೆಗೆ ಗುಣಮಟ್ಟದ ಆಹಾರ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿ. ಹಾಗಾಗಿ ಆಹಾರ ಉತ್ಪನ್ನಗಳನ್ನು ಬೆಳೆಯಲು ರೈತರು ಸಾವಯವ ಕೃಷಿ ಪದ್ಧತಿಯ ಕಡೆ ಒತ್ತು ನೀಡಬೇಕು. ರೈತರು ಬೆಳೆಯುವ ಕೃಷಿ ಉತ್ಪನ್ನಗಳಿಗೆ ಕೊಟ್ಟಿಗೆ, ಹಸಿರು ಎಲೆ, ಎರೆಹುಳು ಗೊಬ್ಬರ ಸೇರಿ ಸಾವಯವ ಗೊಬ್ಬರ ಬೆಳಸಿ ಆಹಾರ ಉತ್ಪನ್ನಗಳನ್ನು ಬೆಳೆಯಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿಯಿಂದ ಮನೆಮನೆಗೆ ಗಂಗೆಯ ಮಾದರಿ ಇಡಲಾಗಿತ್ತು. ಜತೆಗೆ ನರೇಗಾ ಯೋಜನೆಯ ಮಾದರಿಗಳು ಚರ್ಚೆಗೂ ಗ್ರಾಸವಾಗಿತ್ತು. ತೆಂಗು ಸಸಿ ಮಡಿ, ಕುಂಬಳಕಾಯಿ ಮತ್ತಿತರ ತರಕಾರಿ, ಹಣ್ಣುಗಳಲ್ಲಿ ಕೆತ್ತನೆ ವಾಡಿರುವ ನಾನಾ ಪ್ರಾಣಿ ಮತ್ತಿತರವು ಎಲ್ಲರ ಗಮನ ಸೆಳೆಯಿತು. ಮಳೆಗಳಿಗೆ ಭೇಟಿ ನೀಡಿದ ಸಾರ್ವಜನಿಕರು ಪ್ರದರ್ಶನಕ್ಕಿರಿಸಿದ್ದನ್ನು ವೀಕ್ಷಿಸುವ ಜತೆಗೆ ಅವುಗಳ ವಾಹಿತಿ ಪಡೆದುಕೊಳ್ಳುತ್ತಿದ್ದು, ಶನಿವಾರದವರೆಗೂ ಮೇಳ ನಡೆಯಲಿದ್ದು, ಜನಸಾಗರವೇ ಹರಿದು ಬರುವ ನಿರೀಕ್ಷೆಯಿದೆ.
ಜಿಲ್ಲಾ ಮಟ್ಟದ ರೈತರಿಗೆ ಆತ್ಮಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪ್ರವೀಣ್ ಪಿ. ಬಾಗೇವಾಡಿ, ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಕುವಾರ್, ಜಿಲ್ಲಾ ಕೃಷಿಕ ಸವಾಜದ ಅಧ್ಯಕ್ಷ ಡಿ.ಎಲ್.ನಾಗರಾಜ್, ಅಪರ ಜಿಲ್ಲಾಧಿಕಾರಿ ಮಂಗಳಾ, ಜಂಟಿ ಕೃಷಿ ನಿರ್ದೇಶಕಿ ಎಂ.ಆರ್.ಸುಮಾ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಸ್.ಆರ್.ಕುವಾರಸ್ವಾಮಿ, ಕೃಷಿ ಉಪನಿರ್ದೇಶಕರಾದ ಭವ್ಯರಾಣಿ, ನಾಗರಾಜ್, ರೇಷ್ಮೆ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸಗೌಡ ಇದ್ದರು.
ಗಮನ ಸೆಳೆದ ಕಲಾಕೃತಿಗಳು: ಗುರುವಾರ ಆರಂಭವಾದ ಜಿಲ್ಲಾಮಟ್ಟದ ಸಿರಿಧಾನ್ಯ-ಸಾವಯವ ಹಾಗೂ ಲಪುಷ್ಪ ಪ್ರದರ್ಶನದಲ್ಲಿ ಸಾವಯವ ಕೃಷಿ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸಲು ಮಳಿಗೆಗಳು, ಸಿರಿ ಧಾನ್ಯಗಳಿಂದ ನಿರ್ಮಾಣ ಮಾಡಿರುವ ರಾಶಿ, ನೇಗಿಲು, ಕೃಷಿ ಮನೆ, ಫಲ-ಪುಷ್ಪ ಸೇರಿ ಹಲವು ಕಲಾಕೃತಿಗಳು ಗಮನ ಸೆಳೆದವು. ಮೊದಲ ದಿನವೆ ಜಿಲ್ಲೆಯ ನಾನಾ ಭಾಗಗಳಿಂದ ಭೇಟಿ ನೀಡಿದ್ದ ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು, ಪ್ರದರ್ಶನ ಕಣ್ತುಂಬಿಕೊಂಡರು. ಮೇಳದಲ್ಲಿ ಪ್ರದರ್ಶನದಲ್ಲಿ ರೈತರ ಮನೆಯಂಗಳ ವಾದರಿ ಸುಗ್ಗಿ ಸಂಭ್ರಮ ನೆನಪಿಸುವಂತಿತ್ತು. ಕಣದಲ್ಲಿ ರಾಗಿ ರಾಶಿ ವಾಡಿ, ಕೃಷಿಗೆ ಬಳಸುವ ನೇಗಿಲು ಮತ್ತೀತರ ಸಲಕರಣೆ ಇರಿಸಿ, ಗುಡಿಸಲು ನಿರ್ಮಾಣ ಮಾಡಲಾಗಿತ್ತು. ಮರಳಿನಿಂದ ಬಿಡಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪ್ರತಿಮೆ ಆಕರ್ಷಿಸುವಂತಿತ್ತು.
ಯೋಜನೆ ಕುರಿತು ಮಾಹಿತಿ: ಜಲಾನಯನ ಉಪಚಾರಗಳ ವಾದರಿ, ಪಾಲಿಹೌಸ್, ಕೃಷಿಯಲ್ಲಿ ಬಳಕೆ ವಾಡುವ ಆಧುನಿಕ ಯಂತ್ರೋಪಕರಣ, ರೇಷ್ಮೆ ಸಿದ್ಧಪಡಿಸಿದ ನಾನಾ ವಸ್ತು, ಬಣ್ಣ ಬಣ್ಣದ ಕ್ಯಾಪ್ಸಿಕಂನಿಂದ ತಯಾರಿಸಿದ್ದ ನವಿಲು, ಹಣ್ಣು, ತರಕಾರಿ ಕಲಾಕೃತಿಗಳು, ಮೀನುಗಾರಿಕೆ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಮತ್ಸ್ಯ ಪ್ರದರ್ಶನ, ಬೇವಿನ ಹಿಂಡಿ, ಎರೆಹುಳು ಗೊಬ್ಬರ, ಅಜೋಲ, ಸಾವಯವ ಕೃಷಿ ಉತ್ಪನ್ನ ಮತ್ತಿತರವು ಪ್ರದರ್ಶನಕ್ಕಿರಿಸಲಾಗಿತ್ತು. ಪುಸ್ತಕ ಮಳಿಗೆಗಳು ಸ್ಥಾಪಿಸಲಾಗಿತ್ತಲ್ಲದೆ, ಉತ್ತಮ ಆರೋಗ್ಯಕ್ಕೆ ಸಹಕಾರಿಯಾದ ತಿನಿಸುಗಳ ಮಳಿಗೆಗಳಿಗೂ ಜನ ಮುಗಿಬಿದ್ದರು. ಒಟ್ಟು 100 ಮಳಿಗೆ ಸ್ಥಾಪಿಸಲಾಗಿತ್ತು. ಸಿರಿಧಾನ್ಯ ಖಾದ್ಯಗಳು ಅಂತೂ ನೋಡುಗರ ಬಾಯಲ್ಲಿ ನೀರೂರಿಸಿತು.
ಪ್ರಚಾರದ ಕೊರತೆ: ಜಿಲ್ಲಾಮಟ್ಟದ ಸಿರಿಧಾನ್ಯ- ಸಾವಯವ ಮೇಳ ಹಾಗೂ ಫಲಪುಷ್ಪ ಪ್ರದರ್ಶನದ ಬಗ್ಗೆ ಕೆಲವರಿಂದ ಮೆಚ್ಚುಗೆ ವ್ಯಕ್ತವಾಯಿತಾದರೆ, ಇನ್ನು ಕೆಲವರು ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನವ್ಯಕ್ತಪಡಿಸಿದರು. ಪ್ರಚಾರ ಕೈಗೊಂಡಿದ್ದರೆ, ಮತ್ತಷ್ಟು ಮಂದಿ ರೈತರು ಭಾಗವಹಿಸುತ್ತಿದ್ದರು ಎಂದು ಕೆಲ ರೈತರು ದೂರಿದರು. ವಾಹನ ವ್ಯವಸ್ಥೆ ವಾಡಿ, ಕರೆತಂದಿರುವವರಲ್ಲಿ ಸುಮಾರು ಮಂದಿ ರೈತರೇ ಅಲ್ಲ. ಬಲವಂತವಾಗಿ ಕರೆತರಲಾಗಿದೆ ಎಂದು ಆರೋಪಿಸಿದರು.