

ಸಿರಗುಪ್ಪ: ಕಿರಿಯ ವಕೀಲರು ಕಾನೂನು ಬದಲಾವಣೆಗಳ ಕುರಿತು ನಿರಂತರ ಅಭ್ಯಾಸ ಮಾಡುವುದು ಅನಿವಾರ್ಯವಾಗಿದೆ ಎಂದು ರಾಜ್ಯ ವಕೀಲರ ಪರಿಷತ್ ಸದಸ್ಯ ಎಂ.ಕೋಟೇಶ್ವರರಾವ್ ತಿಳಿಸಿದರು.
ಪಟ್ಟಣದ ವಕೀಲರ ಸಂಘದ ಆವರಣದಲ್ಲಿ ರಾಜ್ಯ ವಕೀಲರ ಪರಿಷತ್ ಮತ್ತು ತಾಲೂಕು ವಕೀಲರ ಸಂಘದಿಂದ ವಕೀಲರಿ ಗಾಗಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಂಗಳವಾರ ಮಾತನಾಡಿದರು. ಕಾನೂನು ಪದವಿ ಪಡೆದ ಮಾತ್ರಕ್ಕೆ ಒಳ್ಳೆಯ ವಕೀಲರಾಗಲು ಸಾಧ್ಯವಿಲ್ಲ. ಕಾನೂನಿನ ಹೊಸ ವಿಚಾರಗಳನ್ನು ಅರಿತು ಕೊಳ್ಳಬೇಕೆಂದು ಸಲಹೆ ನೀಡಿದರು.
ಕೆಲವು ವಕೀಲರು ಕನ್ನಡ-ಇಂಗ್ಲಿಷ್ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ನಿರಂತರ ಅಭ್ಯಾಸದಿಂದ ಎಲ್ಲವೂ ಸಾಧ್ಯ. ನಿಮಗೆ ಬರುವ ಭಾಷೆಯಲ್ಲಿ ಸ್ಪಷ್ಟವಾಗಿ ಮಾತನಾಡಿ ನ್ಯಾಯಾಧೀಶರಿಗೆ ನಿಮ್ಮ ಉದ್ದೇಶವನ್ನು ಮನವರಿಕೆ ಮಾಡುವ ಕಲೆಯನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಿರಂತರವಾಗಿ ಕಲಿತರೆ ಯಾವುದೂ ಅಸಾಧ್ಯವಲ್ಲ ಎಂದು ಹೇಳಿದರು.
ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಚ್.ವಿಟ್ಟಲ್ಕೋಡ್ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಬಗ್ಗೆ ವಕೀಲರಿಗೆ ಮಾಹಿತಿ ನೀಡಿದರು. ಜೆಎಂಎಫ್‌ಸಿ ಮತ್ತು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಅಶೋಕ ಆರ್.ಎಚ್. ಮತ್ತು ವಕೀಲರ ಸಂಘದ ಅಧ್ಯಕ್ಷ ಯು.ವೆಂಕೋಬ, ಬಳ್ಳಾರಿ ವಕೀಲರ ಸಂಘದ ಅಧ್ಯಕ್ಷ ರಾಮಬ್ರಹ್ಮಂ, ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಎಂ.ಶರೀಫ್ ಸಾಬ್, ಕಾರ್ಯದರ್ಶಿ ಎಂ.ಶಿವಕುಮಾರ ಸ್ವಾಮಿ, ಜಂಟಿ ಕಾರ್ಯದರ್ಶಿ ಮಂಜುಳಾ, ಖಜಾಂಚಿ ಸಣ್ಣಹುಸೇನಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ರಾಮಪ್ಪ, ಜಗದೀಶ ಸ್ವಾಮಿ, ಅಬ್ದುಲ್ ಖಾದರ್, ಬಾಬುಖಾನ್, ಎ.ಕೆ.ಜಿಲಾನಿ, ಎಚ್.ಶೇಖಣ್ಣ, ಹಿರಿಯ ವಕೀಲರಾದ ಎಚ್.ಕೆ.ಮಲ್ಲಿಕಾರ್ಜುನಯ್ಯ ಸ್ವಾಮಿ, ವೀರಣ್ಣ ಪತ್ತಾರ್, ಸಿದ್ದಲಿಂಗಯ್ಯಸ್ವಾಮಿ, ಎ.ಶಿವರುದ್ರಗೌಡ, ಕೆ.ವೀರೇಶಗೌಡ, ಕೆ.ಮಂಜುನಾಥ, ಬಿ.ಜಿ.ಸುಧಾಕರರೆಡ್ಡಿ, ಕೆ.ಶ್ರೀನಿವಾಸ ಇನ್ನಿತರರು ಇದ್ದರು.