ಸರ್ ಎಂ ವಿ 163 ನೇ ಜನ್ಮ ದಿನದ ಆಚರಣೆ

Published on

ಬೆಂಗಳೂರು:
ನಗರದ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ಸ್ವದೇಶಿ ವಿಜ್ಞಾನ ಆಂದೋಲನದ ಸಹಯೋಗದಲ್ಲಿ ಭಾರತ ರತ್ನ ಸರ್ ಎಂ.ವಿಶ್ವೇಶರಯ್ಯನವರ 163ನೆಯ ಜನ್ಮದಿನದ ಅಂಗವಾಗಿ ‘ಭಾರತದಲ್ಲಿ ಅಭಿವೃದ್ಧಿ ಪಡಿಸಿದ ಉತ್ಪನ್ನಗಳನ್ನು ಬಾಹ್ಯಾಕಾಶ ಮತ್ತು ರಕ್ಷಣಾ ವಿಭಾಗಳಲ್ಲಿ ಬಳಸುವ ವಿಚಾರ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.
ಸಿ ಎಸ್ ಐ ಆರ್- ಎನ್ ಎ ಎಲ್ ನ ಪಾರ್ಮರ್ ಡಿಸ್ಟಿಂಗ್ವಿಶ್ಡ ವಿಜ್ಞಾನಿ ಮತ್ತು ಎಸ್ ವಿ ಎ ಕೆ ಯ ಉಪಾಧ್ಯಕ್ಷರಾದ ಡಾ ವಿ.ಶುಭಾ ಅವರು ವಿಶೇಷ ಉಪನ್ಯಾಸ ನೀಡಿದರು.
ಭಾರತದ ಮಹತ್ವದ ಪ್ರಾಜೆಕ್ಟ್ ಆದ ದೃಷ್ಟಿ ವಾಯುನೆಲೆಯಲ್ಲಿ ವಿಮಾನಗಳ ಹಾರಟ ಹವಮಾನ ಏರಿಳಿತಗಳಲ್ಲಿ ಮುನ್ಸೂಚನೆ ನೀಡುವಲ್ಲಿ ಹೇಗೆ ಕೆಲಸ ನಿರ್ವಹಿಸುತ್ತದೆ. ಅದೇ ರೀತಿ ರೈಲ್ವೆ ಸಂಪರ್ಕ, ರಕ್ಷಣಾ ಇಲಾಖೆಗೆ ಸಹಕಾರಿಯಾಗಿದೆ. ಇದು ಪ್ರಪಂಚದಾದ್ಯಂತದ ಮನ್ನಣೆ ಪಡೆದ ಭಾರತದ ಈ ಅತ್ಯುನ್ನತ ಸಂಶೋಧನೆಯ ಬಗ್ಗೆ ಮಾಹಿತಿ ನೀಡಿದರು.
ಸ್ವದೇಶೀ ವಿಜ್ಞಾನ ಆಂದೋಲನ ಕರ್ನಾಟಕದ ರಾಜ್ಯ ಕಾರ್ಯದರ್ಶಿ ರಮೇಶ್ ಮಾತನಾಡಿ,
ವಿಶ್ವೇಶ್ವರಯ್ಯನವರಂತೆ ಪ್ರತಿಭಾವಂತ ಎಂಜಿನಿಯರ್ ಆಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
ವಿಶ್ವೇಶ್ವರಯ್ಯನವರಂತ ಇಂಜಿನಿಯರ್ ನಮ್ಮ ದೇಶಕ್ಕೆ ಬೇಕು. ಅವರ ಬುದ್ದಿವಂತಿಕೆಗೆ ಸಾಕ್ಷಿಯಾಗಿ ಅವರು ನಿರ್ಮಿಸಿರುವ ಅಣೆಕಟ್ಟೆಗಳೇ ಸಾಕ್ಷಿ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಬಸವರಾಜು ಬಿ ವಿ ಅವರು ಅಧ್ಯಕ್ಷತೆ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net