ವಿಶ್ವೇಶ್ವರಯ್ಯ ಕೊಡುಗೆ ನಾಡಿಗೆ ಅನನ್ಯ

15KDR3 ENGINEARS
ಕಡೂರು ಸಿವಿಲ್ ಇಂಜಿನಿಯರ್ಸ್‌ ಅಸೋಸಿಯೇಟ್ಸ್ ಸಂಘವನ್ನು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಉದ್ಘಾಟಿಸಿದರು. ರಘುರಾಮ್, ಪ್ರೇಮ್‌ಕುಮಾರ್, ಕೆ.ಜಿ.ರಮೇಶ್, ಡಿ.ಪ್ರಶಾಂತ್, ಆದರ್ಶ್, ಪುನೀತ್, ಚೇತನ್ ಇತರರಿದ್ದರು.
Published on

ಕಡೂರು:: ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ನಾಡಿಗೆ ನೀಡಿದ ಕೊಡುಗೆ ಅವಿಸ್ಮರಣೀಯ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಭಾನುವಾರ ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನದ ಅಂಗವಾಗಿ ಇಂಜಿನಿಯರ್ಸ್‌ ಡೇ ಪ್ರಯುಕ್ತ ಕಡೂರು ಸಿವಿಲ್ ಇಂಜಿನಿಯರ್ ಅಸೋಸಿಯೇಟ್ಸ್ ನೂತನ ಸಂಘ ಉದ್ಘಾಟಿಸಿ ಮಾತನಾಡಿದರು.
ತಾಂತ್ರಿಕತೆ, ನೈಪುಣ್ಯ, ಶಿಸ್ತು, ಸಮಯ ಪ್ರಜ್ಞೆಯನ್ನು ವಿಶ್ವೇಶ್ವರಯ್ಯ ಅವರಲ್ಲಿ ಕಾಣಬಹುದಿತ್ತು. ಅಪ್ರತಿಮ ಇಂಜಿನಿಯರ್ ಆಗಿದ್ದ ಅವರು ವಿದೇಶಗಳಲ್ಲಿಯೂ ಕೀರ್ತಿ ಗಳಿಸಿದ ಮಹಾನ್ ಚೇತನ. ಬ್ರಿಟಿಷರು, ದೇಶದ ರಾಜರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದ ಹೆಮ್ಮೆಯ ಪುತ್ರ ಎಂದರು.
ಮೊದಲ ಬಾರಿಗೆ ಪಟ್ಟಣದ ಸಿವಿಲ್ ಇಂಜಿನಿಯರ್‌ಗಳು ಒಂದೆಡೆ ಸೇರಿ ಸಂಘಟಿತರಾಗಿ ಸಾಮಾಜಿಕ ಸೇವೆ ಮಾಡಲು ಮುಂದೆ ಬಂದಿದ್ದು ವಿಶ್ವೇಶ್ವರಯ್ಯ ಅವರಂತೆ ಸಮಾಜ ಸೇವೆಗೆ ಒತ್ತು ನೀಡಬೇಕಿದೆ. ಸಂಘವು ನೀಡಿರುವ ಬೇಡಿಕೆಯಾದ ಪ್ರವಾಸಿ ಮಂದಿರ ರಸ್ತೆಗೆ ಸರ್.ಎಂ.ವಿ ಎಂದು ನಾಮಕರಣ ಮಾಡಲು ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಎಲ್ಲರ ಸಹಮತ ಪಡೆದು ನಿಮ್ಮ ಬೇಡಿಕೆಯನ್ನು ಈಡೇರಿಸಲಾಗುತ್ತದೆ ಎಂದರು.
ಇಂಜಿನಿಯರ್ಸ್‌ ಸಂಘದ ಕಾರ್ಯದರ್ಶಿ ಸಿ.ಎಚ್.ಪ್ರೇಮಕುಮಾರ್ ಮಾತನಾಡಿ, ಕಡೂರು ಸಿವಿಲ್ ಇಂಜಿನಿಯರ್ ಸಂಘಟನೆ ಮುಂದಿನ ದಿನಗಳಲ್ಲಿ ಸಮಾಜಮುಖಿಯಾಗಿ ಸೇವೆ ಸಲ್ಲಿಸಲಿದೆ ಎಂದು ಹೇಳಿದರು.
ಕಡೂರು ಸಿವಿಲ್ ಇಂಜಿನಿಯರ್ ಅಸೋಸಿಯೇಟ್ಸ್ ಅಧ್ಯಕ್ಷ ಆರ್.ಎಸ್.ರಘುರಾಮ್, ಖಜಾಂಚಿ ಕೆ.ಜಿ.ರಮೇಶ್, ನಿರ್ದೇಶಕರಾದ ಕೆ.ಆರ್. ಮಧುಸೂದನ್, ಜಿ.ಎಸ್.ಪುಟ್ಟಪ್ಪ, ಕೆ.ಪಿ. ತಮ್ಮಯ್ಯ, ಡಿ.ಪ್ರಶಾಂತ್, ಬಿ.ಎಸ್.ಚೇತನ್, ಎಸ್.ಆದರ್ಶಕುಮಾರ್, ಸಾಗರ್ ಜಗದೀಶ್, ಕೆ.ಆರ್.ಪುನೀತ್, ಎಂ.ಎ. ಶರತ್, ಕೆ.ಎಸ್.ಪುನೀತ್, ಹಾಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net