'ಎವರೆಸ್ಟ್‌' ಫಿಶ್ ಕರಿ ಬ್ಯಾನ್​ ಮಾಡಿದ ಸಿಂಗಾಪುರ..ಕಾರಣ ಇದೇ ನೋಡಿ..!

fish curry
Published on

ನವದೆಹಲಿ: ಭಾರತದ ಜನಪ್ರಿಯ ಉತ್ಪನ್ನವಾದ ಮಸಾಲೆ ತಯಾರಕ ಎವರೆಸ್ಟ್‌ನ ಫಿಶ್ ಕರಿ ಮಸಾಲಾವನ್ನು ಬ್ಯಾನ್ ಮಾಡಲು ಸಿಂಗಾಪುರ ಆದೇಶಿಸಿದೆ.

ಇದರಲ್ಲಿ ಸುರಕ್ಷಿತ ಮಿತಿಯನ್ನು ಮೀರಿ ಕೀಟನಾಶಕ ಎಥಿಲೀನ್ ಆಕ್ಸೆಡ್ ಇದೆ ಎಂದು ಆರೋಪಿಸಿದೆ.

ಫಿಶ್ ಕರಿ ಮಸಾಲಾದಲ್ಲಿ ಎಥಿಲೀನ್ ಆಕ್ಸೈಡ್ ಕೀಟನಾಶಕವಿದೆ. ಎಥಿಲೀನ್ ಆಕ್ಸೈಡ್ ಅನ್ನು ಆಹಾರದಲ್ಲಿ ಬಳಸಲು ಅನುಮತಿಸಲಾಗಿಲ್ಲ. ಕೃಷಿ ಉತ್ಪನ್ನಗಳ ಪ್ಯುಮಿಗೇಶನ್ ವೇಳೆ ಸೂಕ್ಷ್ಮಜೀವಿ ಮಾಲಿನ್ಯವನ್ನು ತಡೆಗಟ್ಟಲು ಮಾತ್ರ ಅದನ್ನು ಬಳಸಲಾಗುತ್ತದೆ ಎಂದು ಎಸ್​ಎಫ್​ಎ ಮಾಹಿತಿ ನೀಡಿದೆ.

ಸಿಂಗಾಪುರದ ಆಹಾರ ನಿಯಮಗಳ ಅಡಿಯಲ್ಲಿ, ಎಥಿಲೀನ್ ಆಕ್ಸೆಡ್ ಅನ್ನು ಮಸಾಲೆಗಳ ಸ್ಟೆರಿಲೈಜೇಶನ್‌ನಲ್ಲಿ ಮಾತ್ರ ಬಳಸಲು ಅನುಮತಿಸಲಾಗಿದೆ ಎಂದು ಎಸ್​ಎಫ್​ಎ ಹೇಳಿದೆ.

ಕಡಿಮೆ ಮಟ್ಟದ ಎಥಿಲೀನ್ ಆಕ್ಸೈಡ್ ಸೇರಿರುವ ಆಹಾರವನ್ನು ಸೇವಿಸುವುದರಿಂದ ತಕ್ಷಣದ ಅಪಾಯವಿಲ್ಲ. ಆದರೆ ಇದರ ದೀರ್ಘಕಾಲಿಕ ಬಳಕೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆಹಾರ ಸಂಸ್ಥೆ ತಿಳಿಸಿದೆ.

ಈ ಉತ್ಪನ್ನಗಳನ್ನು ಸೇವಿಸಿದವರು, ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರು ವೈದ್ಯಕೀಯ ಸಲಹೆಯನ್ನು ಪಡೆಯಬೇಕು ಎಂದು ಎಸ್​ಎಫ್​ಎ ಗ್ರಾಹಕರಿಗೆ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net