ಪತ್ನಿಯನ್ನೇ ಇರಿದು ಕೊಂದ ಪಾಪಿ ಪತಿ

Crime Logo
Published on

ಬೆಂಗಳೂರು: ಕೌಟುಂಬಿಕ ಕಲಹ ಹಾಗೂ ಪತ್ನಿಯ ನಡತೆಯ ಮೇಲೆ ಶಂಕೆ ವ್ಯಕ್ತ ಪಡಿಸಿ ಪತಿಯೇ ಚಾಕುವಿನಿಂದ ಇರಿದು ದಾರುಣವಾಗಿ ಕೊಂದಿದ್ದಾನೆ.
ಇಂದು(೨೮) ಕೊಲೆಯಾದವರು. ಪೇಟಿಂಗ್ ಕೆಲಸ ಮಾಡುತ್ತಿದ್ದ ಮೈಕಲ್ ್ರಾಸಿಸ್(೩೦) ಆರೋಪಿ.
ಕೋರಮಂಗಲ ೬ ಬ್ಲಾಕ್‌ನಲ್ಲಿ ಗುರುವಾರ ಮಧ್ಯಾಹ್ನ ೩.೩೦ ಕ್ಕೆ ಈ ಘಟನೆ ನಡೆದಿದೆ.
ಕಳೆದ ೧೦ ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈಜಿಪುರದಲ್ಲಿ ವಾಸವಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮೃತ ಇಂದು ಕಳೆದ ೬ ತಿಂಗಳ ಹಿಂದೆ ಪತಿ ತೊರೆದು ಕೋರಮಂಗಲದ ವೆಂಕಟಾಪುರದಲ್ಲಿರುವ ತವರು ಮನೆಗೆ ಹೋಗಿದ್ದಳು. ನಂತರ ಕುಟುಂಬ ಸದಸ್ಯರು ರಾಜಿ ಪಂಚಾಯಿತಿ ಮಾಡಿ ಇಬ್ಬರಿಗೂ ಬುದ್ದಿಮಾತು ಹೇಳಿದ್ದರು. ಇತ್ತೀಚೆಗೆ ಆರೋಪಿಯು ಬೇರೊಂದು ಬಾಡಿಗೆ ಮನೆ ಮಾಡಿ ಪತ್ನಿ ಮಕ್ಕಳೊಂದಿಗೆ ವಾಸವಿದ್ದ. ಈ ಮಧ್ಯೆ ಆರೋಪಿಯು ಪತ್ನಿಯ ಮೇಲೆ ಸಂಶಯ ವ್ಯಕ್ತಪಡಿಸಿ ಆಕೆಯ ಮೇಲೆ ಹಲ್ಲೆ ನಡೆಸಿದ್ದ ಇದರಿಂದ ನೊಂದ ಇಂದು ಮತ್ತೆ ತನ್ನ ತವರು ಮನೆಗೆ ಹೋಗಿದ್ದಾಳೆ. ಇದರಿಂದ ಆಕ್ರೋಶಗೊಂಡಿದ್ದ ಆರೋಪಿ ಇಂದು ಕೆಲಸ ಮಾಡುವ ಜಾಗಕ್ಕೆ ಹಿಂಬಾಲಿಸಿಕೊಂಡು ಹೋಗಿ ಗಲಾಟೆ ಮಾಡುತ್ತಿದ್ದ ಇದರಿಂದ ಬೇಸತ್ತ ಇಂದು ಕೋರಮಂಗಲ ಠಾಣೆಗೆ ತೆರಳಿ ಗಂಡನ ವಿರುದ್ಧ ದೂರು ನೀಡಿದ್ದಳು. ಪೊಲೀಸರು ಸಹ ಕರೆ ಮಾಡಿ ಆರೋಪಿಯನ್ನು ಠಾಣೆಗೆ ಬರುವಂತೆಯೂ ತಿಳಿಸಿದ್ದರು. ಇದರಂತೆ ಠಾಣೆ ಸಮೀಪ ಬಳಿ ಬಂದಿದ್ದ ಆರೋಪಿ ದೂರು ನೀಡಿ ಹೊರಬರುತ್ತಿದ್ದಂತೆ ಆಕೆಯನ್ನು ಹಿಂಬಾಲಿಸಿ ಆಕೆ ಜತೆ ಗಲಾಟೆ ತೆಗೆದು ಡಿಸಿಪಿ ಕಚೇರಿಯ ಕೂಗಳತೆಯ ದೂರದಲ್ಲಿ ಚಾಕುವಿನಿಂದ ಹಲವು ಬಾರಿ ಇರಿದು ಪರಾರಿಯಾಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಹೋದ ಪೊಲೀಸರು ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದು ಆದರೆ ಇಂದು ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ತಂಡವನ್ನು ರಚಿಸಲಾಗಿದ್ದು, ಆರೋಪಿಗಾಗಿ ಶೋಧ ಕಾರ್ಯ ನಡೆಸಲಾಗಿದ್ದು ಶೀಘ್ರದಲ್ಲಿಯೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net