"ದಾಸ" ಡಿಬಾಸ್ ಬೆಡಗಿ ಸಿಂಧು ಮೆನನ್ 3 ಮಕ್ಕಳ ತಾಯಿ; ​ನಟಿ ಈಗ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ?

sindhu
Published on

ಬೆಂಗಳೂರು: ಸ್ಯಾಂಡಲ್​ವುಡ್​ನ ಸ್ಟಾರ್​ ನಟರ ಜತೆ ನಟಿ ಸಿಂಧು ಮೆನನ್ ನಟಿಸಿದ್ದಾರೆ. ಕನ್ನಡ,ತೆಲಗು ,ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಕ್ರಿಯರಾಗಿರುವ ಚತುರ್ಭಾಷಾ ನಟಿ. ಸಾಲು ಸಾಲು ಹಿಟ್​ ಸಿನಿಮಾದಲ್ಲಿ ನಟಿಸಿದ್ದ ಈಕೆ ಈಗ ಸಿನಿಮಾ ಇಂಡಸ್ಟ್ರಿಯಿಂದ ದೂರವಾಗಿದ್ದಾರೆ. ಸಿಂಧು ಮೆನನ್ ಎಲ್ಲಿದ್ದಾರೆ?  ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ....

ಸಿಂಧು ಮೆನನ್‌ ಮೂಲತಃ ಮಲಯಾಳಿ ಕುಟುಂಬಕ್ಕೆ ಸೇರಿದವರು. ಮಾತೃ ಭಾಷೆ ಮಲಯಾಳಂ ಆದರೂ ಸಿಂಧು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ವಿದ್ಯಾಭ್ಯಾಸ ಮಾಡಿದ್ದರಿಂದ ಅವರಿಗೆ ಚೆನ್ನಾಗಿ ಕನ್ನಡ ಬರುತ್ತದೆ.

1996ರಲ್ಲಿ ಕನ್ನಡ ಚಲನಚಿತ್ರವೊಂದರಲ್ಲಿ ಬಾಲ ನಟಿಯಾಗಿ ಪಾದಾರ್ಪಣೆ ಮಾಡಿದರು. ಆ ನಂತರ ಮೋಹನ್ ಲಾಲ್, ಜಯರಾಮ್ ಮತ್ತು ಮಮ್ಮುಟ್ಟಿ ಅವರ ಚಿತ್ರಗಳಲ್ಲಿ ನಟಿಸಿದರು. ಶ್ರೀಹರಿ ನಾಯಕನಾಗಿ ನಟಿಸಿದ್ದ ಭದ್ರಾಚಲಂ ಸಿನಿಮಾಗಳಲ್ಲಿ ನಟಿಸಿದ್ದಾಳೆ. ಅವರು ತೆಲುಗು ಚಿತ್ರಗಳಲ್ಲಿ ವೈಶಾಲಿ, ಸಾರತ್, ತ್ರಿನೇತ್ರಂ ಮತ್ತು ಇತರ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.

`ಪ್ರೇಮ ಪ್ರೇಮ ಪ್ರೇಮ' ಚಿತ್ರದಿಂದ ಪೂರ್ಣ ಪ್ರಮಾಣದ ನಾಯಿಕಿಯಾಗಿ ಚಂದನವನ ಪ್ರವೇಶಿಸಿದ ಇವರು ಕಿಚ್ಚ ಸುದೀಪ್ ಅಭಿನಯದ `ನಂದಿ' ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಧರ್ಮ' ಚಿತ್ರದ ಮೂಲಕ ಜನಪ್ರಿಯರಾದರು. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸರಣಿ ಚಿತ್ರಗಳನ್ನು ಮಾಡುತ್ತಿರುವಾಗ ಲಂಡನ್‌ನ ಉದ್ಯಮಿಯನ್ನು ವಿವಾಹವಾದರು ಮತ್ತು ಅಲ್ಲಿಯೇ ನೆಲೆಸಿದರು. ಮದುವೆಯ ನಂತರ ಚಿತ್ರರಂಗದಿಂದ ದೂರ ಉಳಿದಿದ್ದ ಸಿಂಧು ಈಗ ಕುಟುಂಬದೊಂದಿಗೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.

ಸಿನಿಮಾದಲ್ಲಿ ಬೇಡಿಕೆಯ ನಟಿ ಆಗಿರುವಾಲೇ ಸಿಂಧು ಮೆನನ್‌ ಹೆತ್ತವರು ನೋಡಿದ ಪ್ರಭು ಎಂಬುವರನ್ನು 25 ಏಪ್ರಿಲ್‌ 2003 ರಲ್ಲಿ ಮದುವೆ ಆದರು. ಮದುವೆ ಆದ ನಂತರ ಲಂಡನ್‌ಗೆ ತೆರಳಿದ ಸಿಂಧು, ಈಗ ಪತಿ ಪ್ರಭು ಹಾಗೂ ಮೂವರು ಮಕ್ಕಳೊಂದಿಗೆ ಅಲ್ಲೇ ನೆಲೆಸಿದ್ದಾರೆ. ದಂಪತಿಗೆ ಒಬ್ಬ ಪುತ್ರಿ, ಇಬ್ಬರು ಗಂಡು ಮಕ್ಕಳಿದ್ದಾರೆ. ಇನ್ಫರ್ಮೇಷನ್‌ ಟೆಕ್ನಾಲಜಿ ಉದ್ಯೋಗಿ ಆಗಿರುವ ಪ್ರಭು ತಮಿಳುನಾಡು ಮೂಲದವರು.

Sindhu Menon 1

ಸೋಷಿಯಲ್ ಮೀಡಿಯಾದಲ್ಲೂ ತುಂಬಾ ಆ್ಯಕ್ಟೀವ್ ಆಗಿದ್ದು, ಕಾಲಕಾಲಕ್ಕೆ ಫ್ಯಾಮಿಲಿ ಫೋಟೋಗಳನ್ನು ಶೇರ್ ಮಾಡ್ತಾ ಇರುತ್ತಾರೆ ಸಿಂಧು ಮೆನನ್. ಈ ಫೋಟೋಗಳು ವೈರಲ್ ಆಗುತ್ತಿರುವಾಗ ಸಿಂಧು ಮೆನನ್ ಕುಟುಂಬವನ್ನು ನೋಡಿ ನೆಟಿಜನ್‌ಗಳು ಮೆಚ್ಚುಗೆ ಸೂಚಿಸಿದ್ದಾರೆ.

ಕೇರಳ ಕುಟ್ಟಿ ಸಿಂಧು, ತಮಿಳು ಹುಡುಗನನ್ನು ಮದುವೆ ಆಗಿ ವಿದೇಶದಲ್ಲಿ ನೆಲೆಸಿದ್ದರೂ ಹುಟ್ಟಿ ಬೆಳೆದ ಕರ್ನಾಟಕವನ್ನು ಮರೆತಿಲ್ಲ. ಆಗ್ಗಾಗ್ಗೆ ಕನ್ನಡ ಸಿನಿಮಾ ನೆನಪುಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net