ಬಾಂಗ್ಲಾ ವಲಸಿಗರಿಗೆ ಪೌರತ್ವ ಪ್ರಮಾಣ ಪತ್ರ ವಿತರಣೆಗೆ ದಿನ ನಿಗದಿಗೊಳಿಸಿ ಎಂದು ಬಿಜೆಪಿ ರಾಜಾಧ್ಯಕ್ಷರಿಗೆ ಪತ್ರ ಬರೆದ ಸಂಸದ ಕರಡಿ ಸಂಗಣ್ಣ

mp karadi sanganna
Published on

ರಾಯಚೂರು: ಸಿಂಧನೂರು ತಾಲೂಕಿನಲ್ಲಿರುವ ಬಾಂಗ್ಲಾ ವಲಸಿಗರಿಗೆ ಪೌರತ್ವ ಪ್ರಮಾಣ ಪತ್ರ ವಿತರಣೆಗೆ ದಿನ ನಿಗದಿ ಮಾಡುವಂತೆ ಕೋರಿ ಸಂಸದ ಕರಡಿ ಸಂಗಣ್ಣ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ಸಿಂಧನೂರು ತಾಲೂಕಿನಲ್ಲಿರುವ ಆರ್ ಎಚ್ ಕ್ಯಾಂಪ್​​ಗಳಲ್ಲಿ ಅಂದಾಜು 20 ಸಾವಿರ ಬಾಂಗ್ಲಾ ವಲಸಿಗರು ಇದ್ದಾರೆ. ಇವರು ಭಾರತೀಯ ಪೌರತ್ವ ಪಡೆಯಲು ಅರ್ಹರಾಗಿದ್ದಾರೆ. ಹೀಗಾಗಿ ಜ.15ರೊಳಗೆ ಸಿಂಧನೂರಿನಲ್ಲಿ ಪೌರತ್ವ ಪ್ರಮಾಣ ಪತ್ರ ವಿತರಣಾ ಸಮಾರಂಭ ನಡೆಸಬೇಕು ಎಂದು ಅವರು ಬಿಜೆಪಿ ರಾಜಾಧ್ಯಕ್ಷ ನಳೀನ್​ ಕುಮಾರ್​ ಕಟೀಲು ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅಥವಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಿ ದಿನ ನಿಗದಿಪಡಿಸಿ ಎಂದು ಸಂಸದರು ಕೋರಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net