ಬೀದಿಬದಿ ವ್ಯಾಪಾರಿಗಳ ಸಂರಕ್ಷಣೆಗೆ ಶ್ರಮ ಅಗತ್ಯ

sindhanour tuci union open
ಸಿಂಧನೂರಿನ ಹಣ್ಣು ವ್ಯಾಪಾರ ಮಾರುಕಟ್ಟೆ ಆವರಣದಲ್ಲಿ ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ(ಟಿಯುಸಿಐ) ನೂತನ ಸಂಘವನ್ನು ಸಸಿಗೆ ನೀರು ಹಾಕುವ ಮೂಲಕ ಟಿಯುಸಿಐ ನೂತನ ಗೌರವಾಧ್ಯಕ್ಷ ಎಂ. ಗಂಗಾಧರ ಉದ್ಘಾಟಿಸಿದರು. ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ದುರಗಪ್ಪ ಕಾರಲಕುಂಟಿ, ಶ್ರಮಜೀವಿ ಹಮಾಲರ ಸಂಘದ ಅಧ್ಯಕ್ಷ ಮಾಬುಸಾಬ ಮುದಿಯಪ್ಪ ಇದ್ದರು.
Published on

ಸಿಂಧನೂರು: ಬೀದಿಬದಿ ವ್ಯಾಪಾರಿಗಳ ಸಂರಕ್ಷಣಾ ಕಾಯ್ದೆ 2014ನ್ನು ಉಲ್ಲಂಘಿಸಿದ ಸ್ಥಳೀಯ ಆಡಳಿತದ ವಿರುದ್ಧ ಹೋರಾಡಿ, ಮೂಲ ಹಕ್ಕುಗಳನ್ನು ಪಡೆಯಲು ಸಂಘ ಶ್ರಮಿಸಬೇಕೆಂದು ಶ್ರಮ ಜೀವಿ ಬೀದಿ ಬದಿ ವ್ಯಾಪಾರಿಗಳ ಸಂಘದ ತಾಲೂಕು ಗೌರವಾಧ್ಯಕ್ಷ ಎಂ. ಗಂಗಾಧರ ಹೇಳಿದರು.

ನಗರದ ಹಣ್ಣು ವ್ಯಾಪಾರ ಮಾರುಕಟ್ಟೆ ಆವರಣದಲ್ಲಿ ಭಾನುವಾರ ಟಿಯುಸಿಐ ನೂತನ ಸಂಘ ಉದ್ಘಾಟಿಸಿ ಮಾತನಾಡಿದರು. ನಗರದ ಫುಟ್‌ಪಾತ್ ರಸ್ತೆಯನ್ನು ಕಿರಾಣಿ ಅಂಗಡಿ, ಹೋಟೆಲ್, ಬಟ್ಟೆ ಹಾಗೂ ಗೊಬ್ಬರ ಅಂಗಡಿ ಮಾಲೀಕರು ಸೇರಿ ಇನ್ನಿತರರು ಅತಿಕ್ರಮಣ ಮಾಡಿಕೊಂಡ ಕಾರಣ ಬೀದಿ ಬದಿಯ ವ್ಯಾಪಾರಿಗಳಿಗೆ ಸ್ಥಳವಿಲ್ಲದೆ ರಸ್ತೆಯಲ್ಲಿ ಕುಳಿತು ವ್ಯಾಪಾರ ಮಾಡುವ ಪರಿಸ್ಥಿತಿ ಒದಗಿದೆ.

ನಗರದಲ್ಲಿ ಖಾಲಿ ಇದ್ದ ಜಾಗದಲ್ಲಿ ಬೀದಿ ಬದಿಯ ವ್ಯಾಪಾರಕ್ಕೆ ಅವಕಾಶ ಇದೆ. ಸಂಚಾರಕ್ಕೆ ತೊಂದರೆಯಾಗದಂತೆ ಕಾನೂನಿನ ಪ್ರಕಾರ ವ್ಯಾಪಾರ ಮಾಡುವ ಮೂಲಕ ಇತರರಂತೆ ನೀವು ಸಹ ಆರ್ಥಿಕವಾಗಿ ಮುಂದೆ ಬಂದು ನಿಮ್ಮ ಮಕ್ಕಳಿಗೆ ಶಿಕ್ಷಣ ಕಲಿಸಬೇಕು ಎಂದು ತಿಳಿಸಿದರು.

ವಕೀಲ ಸಂಘದ ಕಾನೂನು ಸಲಹೆಗಾರ ಚಿದಾನಂದಪ್ಪ ವಕೀಲ ಮಾತನಾಡಿ, ಬೀದಿಬದಿಯ ವ್ಯಾಪಾರಿಗಳ ಅನುಕೂಲಕ್ಕಾಗಿ ಬೀದಿಬದಿಯ ಸಂರಕ್ಷಣಾ ಕಾನೂನು ಇದೆ. ಕಾನೂನಿನ ಪ್ರಕಾರ ನಗರದಲ್ಲಿ ಖಾಲಿ ಇರುವ ಜಾಗದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯಾಪಾರ ಮಾಡಿ. ನ್ಯಾಯಯುತ ಹೋರಾಟಕ್ಕೆ ಸಂಪೂರ್ಣ ಬೆಂಬಲ ಇದೆ ಎಂದರು.

ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ದುರಗಪ್ಪ ಕಾರಲಕುಂಟಿ, ಶ್ರಮಜೀವಿ ಹಮಾಲರ ಸಂಘದ ಅಧ್ಯಕ್ಷ ಮಾಬುಸಾಬ ಮುದಿಯಪ್ಪ, ಶ್ರಮಜೀವಿ ಬೀದಿಬದಿ ವ್ಯಾಪಾರಿ ಸಂಘದ ಪದಾಧಿಕಾರಿಗಳಾದ ಸೋಮಶೇಖರ, ಅಬ್ದುಲ್ ಸಾಬ, ಹುಸೇನಸಾಬ, ರಹಿಂಸಾಬ, ಕಲಂದರ, ಭಾಷಾಸಾಬ, ನಾಸೀರಸಾಬ, ಸೈಯದ ಅನ್ವರ, ರಾಜಮ್ಮ, ಅಮರೇಶ ರಾಠೋಡ, ಅಬ್ದುಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net