ಕಕ್ಷಿದಾರಿಗೆ ನ್ಯಾಯ ಒದಗಿಸಲು ಆದ್ಯತೆ ನೀಡಿ; ನ್ಯಾಯವಾದಿ ಎಂ.ಕಾಳಿಂಗಪ್ಪ ಸಲಹೆ

03122022 sindhanour Lawyers Day
Published on

ಸಿಂಧನೂರು: ವಕೀಲರು ಶುಲ್ಕಕ್ಕೆ ಒತ್ತು ನೀಡದೇ ಕಕ್ಷಿದಾರರಿಗೆ ನ್ಯಾಯ ಒದಗಿಸಲು ಮೊದಲ ಆದ್ಯತೆ ನೀಡಬೇಕು ಎಂದು ಹಿರಿಯ ನ್ಯಾಯವಾದಿ ಎಂ.ಕಾಳಿಂಗಪ್ಪ ಹೇಳಿದರು.

ನಗರದ ವಕೀಲರ ಸಂಘದ ಸಭಾಂಗಣದಲ್ಲಿ ತಾಲೂಕು ನ್ಯಾಯವಾದಿಗಳ ಸಂಘ ಶನಿವಾರ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆಯಲ್ಲಿ ಮಾತನಾಡಿ, ವಕೀಲರು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಮೊದಲು ಸರಿಯಾಗಿ ತಿಳಿದುಕೊಳ್ಳಬೇಕು. ಪ್ರತಿ ಪ್ರಕರಣದ ಕುರಿತು ಹಿರಿಯ ನ್ಯಾಯವಾದಿಗಳು ನ್ಯಾಯಾಲಯದಲ್ಲಿ ಹೇಗೆ ವಾದಿಸುತ್ತಾರೆ. ಕಕ್ಷಿದಾರರಿಗೆ ಹೇಗೆ ಪಾಟಿ ಸವಾಲು ಹಾಕುತ್ತಾರೆ ಎಂಬುದನ್ನು ಗಮನಿಸುತ್ತಿರಬೇಕು. ವಕೀಲರು ನ್ಯಾಯ, ನಿಷ್ಠುರವಾದಿಗಳಾಗಿರಬೇಕು ಎಂದರು.

ವಕೀಲ ಕಲ್ಮಂಗಿ ಅಮರೇಗೌಡ ಮಾತನಾಡಿ, ವಕೀಲರು ಸಮಾಜದ ಒಂದು ಭಾಗ. ನ್ಯಾಯಾಧೀಶರು ಮತ್ತು ವಕೀಲರ ಮಧ್ಯೆ ಸಮನ್ವಯ ಅವಶ್ಯ. ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಬದಲಾಗುತ್ತಿರುವ, ತಿದ್ದುಪಡಿಯಾಗುತ್ತಿರುವ ಕಾನೂನುಗಳ ಬಗ್ಗೆ ಸಮಯೋಚಿತವಾಗಿ ತಿಳಿದುಕೊಂಡು ಪ್ರಕರಣಗಳಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net