

ಹಾವೇರಿ: ಅನ್ನ ಅರಿವು ಆಶ್ರಯಗಳ ಮೂಲಕ ವಿದ್ಯಾಥಿರ್ಗಳ ಜೀವನದಲ್ಲಿ ಬೆಳಕು ಚೆಲ್ಲಿದ ಪುಣ್ಯ ಪುರುಷರು ಶ್ರೀ ಶಾಂತವೀರ ಪಟ್ಟಾಧ್ಯಕ್ಷರು ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ಸಿಂಧಗಿಮಠದಲ್ಲಿ ಶನಿವಾರ ಏರ್ಪಡಿಸಿದ್ದ ಲಿಂ. ಶಾಂತವೀರ ಪಟ್ಟಾಧ್ಯಕ್ಷರ 45ನೇ ಪುಣ್ಯ ಸ್ಮರಣೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ, ಹೊತ್ತನಹಳ್ಳಿ ಸಿಂದಗಿ ಮಠದ ಶಂಭುಲಿಂಗ ಸ್ವಾಮೀಜಿ, ಶೇಗುಣಸಿ ವಿರಕ್ತಮಠದ ಡಾ. ಮಹಾಂತ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಗದುಗಿನ ವಿರೇಶ್ವರ ಪುಣ್ಯಶ್ರಮದ ಸಂಗಮೇಶ ಪಾಟೀಲ ಸಂಗೀತ ಸೇವೆ ನೀಡಿದರು. ತೋಟೇಂದ್ರ ಕುಮಾರ ಕರಡಗಲ್ಲ ತಬಲಾ ಹಾಗೂ ಷಣ್ಮುಖಯ್ಯ ಹಿರೇಮಠ ವಾಯ್ಲಿನ್ ಸಾಥ್ ನೀಡಿದರು.
ಸಿಂದಗಿ ಮಠದ ಸಂಚಾಲಕ ಶಿವಬಸಯ್ಯ ಆರಾಧ್ಯಮಠ, ಜಿ.ಎಸ್ .ಭಟ್, ನಗರಸಭೆ ನಾಮನಿರ್ದೇಶನ ಸದಸ್ಯ ವೀರಣ್ಣ ಹನುಮನಹಳ್ಳಿ, ವಾಗೀಶ ಶಾಸ್ತ್ರೀಗಳು, ಡಂಬಳ ಶಾಸ್ತ್ರೀಗಳು, ಶಿವಯೋಗಿಯ್ಯ ಹಿರೇಮಠ, ಮಲ್ಲಯ್ಯ ರಾಮಾಪುರ, ಈರಣ್ಣ ಮಹಾರಾಜಪೇಟ, ಶಂಕ್ರಣ್ಣ ಇಟಗಿ, ಸಿದ್ದಲಿಂಗಯ್ಯ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.