ಗಾಂಧೀ ಜಯಂತಿ ವೇದಿಕೆಯಲ್ಲಿ ಸರಳ ವಿವಾಹವಾದ ಜೋಡಿ

Gandhi marriage
Published on

ಬೆಂಗಳೂರು: ಕರ್ನಾಟಕ ಗಾಂಧೀ ಸ್ಮಾರಕ ನಿಧಿಯು ಗಾಂಧಿ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧೀಜಿ ಅವರ 155ನೇ ಜನ್ಮಜಯಂತಿ ವಿಶ್ವ ಅಹಿಂಸಾ ದಿನಾಚರಣೆ ವೇದಿಕೆ ಕಾರ್ಯಕ್ರಮದಲ್ಲಿಯೇ ಯುವ ಜೋಡಿಯೊಂದು ದಾಂಪತ್ಯಕ್ಕೆ ಕಾಲಿಟ್ಟಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ಡಾ. ವೂಡೇ ಪಿ. ಕೃಷ್ಣ ಸೇರಿ ಹಲವು ಗಣ್ಯರು ಹೂಗಳ ಪಕಳೆಗಳನ್ನೇ ಅಕ್ಷತೆಯನ್ನಾಗಿಸಿಕೊಂಡು ಆಶೀರ್ವಾದ ಮಾಡಿದರು.

ಗಾಂಧೀ ಸ್ಮಾರಕ ನಿಧಿ ಅಡಿ ಕಾರ್ಯನಿರ್ವಹಿಸುವ ಯಶೋಧ ಮತ್ತು ತನುಜಾ ಎಂಬ ಅಂತರ್ಜಾತಿ ವಧು-ವರರು ಗಾಂಧಿ ಜಯಂತಿ ವೇದಿಕೆ ಕಾರ್ಯಕ್ರಮದಲ್ಲಿ ಹಾರ ಬದಲಾಯಿಸಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net