

Fat loss foods: ಇಂದಿನ ದಿನಗಳಲ್ಲಿ ದೇಹದಲ್ಲಿರುವ ಅತಿಯಾದ ಕೊಬ್ಬನ್ನು ಕರಗಿಸುವುದು ತುಂಬಾ ಗಂಭೀರವಾದ ಸಮಸ್ಯೆ. ಆದರಿಂದ ಹಲವಾರು ಜನರು ಅನೇಕ ರೀತಿಯ ಔಷಧಿಗಳು, ಮನೆಮದ್ದುಗಳನ್ನು ಪ್ರಯತ್ನಿಸುತ್ತಾರೆ. ಆದರೆ, ಯಾವುದೇ ರೀತಿಯ ಬೆಳವಣಿಗೆಗಳು ಅವರ ದೇಹದಲ್ಲಿ ಕಂಡುಬರುವುದಿಲ್ಲ. ಇದರಿಂದ ಚಿಂತೆಗೆ ಮಗ್ನರಾಗಿರುತ್ತಾರೆ. ಹಾಗಾಗಿ ನೀವೇನಾದರೂ ದೇಹದಲ್ಲಿರುವ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಬಯಸಿದರೆ, ಈ ಆಹಾರಗಳನ್ನು ಸೇವಿಸಿರಿ. ಗಣನೀಯವಾಗಿ ಬೊಜ್ಜನ್ನು ಕರಗಿಸಿಕೊಳ್ಳಿ..
ದೇಹದಲ್ಲಿರುವ ಹೆಚ್ಚಿನ ಕೊಬ್ಬನ್ನು ಸುಡುವ ಪಾನೀಯ ಇದಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಿ, ಕೊಬ್ಬಿನ ಕೋಶಗಳನ್ನು ವಿಘಟಿಸುವಂತೆ ಮಾಡುತ್ತದೆ. ಆದರಿಂದ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಸೇವಿಸುವುದು ಬಹಳ ಪ್ರಯೋಜನಕಾರಿ ಎಂದು ತಿಳಿದುಬಂದಿದೆ.
* 1 ಚೂರು ಹಸಿ ಶುಂಠಿ
* 1 ಚಮಚ ನಿಂಬೆ ರಸ
* ½ ಚಮಚ ಜೇನುತುಪ್ಪ
* 1 ಕಪ್ ನೀರು
ಮೊದಲು ಒಂದು ಲೋಟವನ್ನು ತೆಗೆದುಕೊಂಡು ಅದಕ್ಕೆ ನೀರನ್ನು ಹಾಕಿರಿ. ಅದಕ್ಕೆ ಚೂರು ಮಾಡಿದ ಶುಂಠಿಯನ್ನು ಸೇರಿಸಿ 5-10 ನಿಮಿಷಗಳ ಕಾಲ ಕುದಿಯಲು ಬಿಡಿ. ನಂತರ ಅದನ್ನು ಕೆಳಗೆ ಇಳಿಸಿ, ನಿಂಬೆ ರಸ ಮತ್ತು ಜೇನು ಸೇರಿಸಿ ಮಿಕ್ಸ್ ಮಾಡಿ ದಿನಕ್ಕೆ 2 ಬಾರಿ ಕುಡಿಯಿರಿ. ಇದು ದೇಹದಲ್ಲಿರುವ ಅಧಿಕ ಕೊಬ್ಬನ್ನು ತೆಗೆಯುವಂತೆ ಮಾಡುತ್ತದೆ.
ಜೀರಿಗೆ ನೀರು ಸೊಂಟ ಮತ್ತು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುವ ಒಂದು ಪಾನೀಯವಾಗಿದೆ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಿ ಹೊಟ್ಟೆಯಲ್ಲಿ ನೀರು ಶೇಖರಣೆಯಾಗುವುದನ್ನು ತಡೆಯುತ್ತದೆ.
* 1 ಚಮಚ ಜೀರಿಗೆ
* 1 ಕಪ್ ನೀರು
ಮಾಡುವ ವಿಧಾನ
ಮೊದಲು ಒಂದು ಪಾತ್ರೆಗೆ ನೀರನ್ನು ಹಾಕಿ ಅದಕಕೆ ಜೀರಿಗೆ ಸೇರಿಸಿ 8-10 ನಿಮಿಷ ಕುದಿಸಿರಿ. ನಂತರ ಸೋಸಿ ಈ ನೀರನ್ನು ಪ್ರತಿನಿತ್ಯ ಬೆಳಿಗ್ಗೆ ಎದ್ದ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ರಾಗಿಯು ವಿಟಮಿನ್ ಡಿ ಹೊಂದಿರುವ ಆಹಾರ ಪದಾರ್ಥವಾಗಿದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಹೊರಹಾಕುತ್ತದೆ. ಹಾಗಾಗಿ ಈ ಸಲಾಡ್ನ್ನು ಸೇವಿಸುವುದರಿಂದ ಆರೋಗ್ಯವನ್ನು ಸುಧಾರಿಸಲು ಸಹಾಯವಾಗಬಹುದು.
* 1 ಕಪ್ ಮೊಳಕೆ ಕಟ್ಟಿಸಿದ ರಾಗಿ ಕಾಳು
* 1 ಹಸಿರು ಮೆಣಸು
* 2 ಚಮಚ ರುಬ್ಬಿದ ಕೊಬ್ಬರಿ ಚೂರು
* 1 ಚಮಚ ನಿಂಬೆ ರಸ
* ಉಪ್ಪು ಮತ್ತು ಜೀರಿಗೆ ಪೌಡರ್