80,000ಕ್ಕಿಂತ ಕೆಳಗಿಳಿದ ಷೇರುಪೇಟೆ! ಮತ್ತಷ್ಟು ಕುಸಿದ ಬೆಳ್ಳಿ ಬೆಲೆ

ವಿಜಯವಾಣಿ (3)
Published on

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿನ ಮಿಶ್ರ ಪ್ರವೃತ್ತಿ ಮತ್ತು ಕೆಲವು ಭಾರತೀಯ ಷೇರುಗಳ ವಿಪರೀತ ಮಾರಾಟದಿಂದಾಗಿ ಗುರುವಾರ ಭಾರತೀಯ ಷೇರುಪೇಟೆ ಶೇ.1.5ರಷ್ಟು ಕುಸಿದಿದೆ. ದಿನದ ಮಧ್ಯಭಾಗದಲ್ಲಿ 1,315.16 ಅಂಕ ಕುಸಿದು 78,918.92ಕ್ಕೆ ತಲುಪಿದ್ದ ಸೆನ್ಸೆಕ್ಸ್, ಕೊನೆಯಲ್ಲಿ 1,190.34 ಅಂಕ ಇಳಿಕೆಯಾಗಿ 79,043.74ಕ್ಕೆ ತಲುಪಿತು. ಹೂಡಿಕೆದಾರರ 1.5 ಲಕ್ಷ ಕೋಟಿ ರೂ. ನಷ್ಟವಾಯಿತು. ನಿಫ್ಟಿ 360 ಅಂಕ ಕುಸಿದು 23,914ಕ್ಕೆ ಮುಟ್ಟಿತು. ಅದಾನಿ ಸಮೂಹದ 11 ಕಂಪನಿಗಳ ಪೈಕಿ 5 ಕಂಪನಿಗಳ ಷೇರುಗಳು ಏರಿಕೆ ದಾಖಲಿಸಿದವು. ಅದರಲ್ಲೂ ಅದಾನಿ ಟೋಟಲ್ ಗ್ಯಾಸ್ ಷೇರುಗಳು ಶೇ.16ರಷ್ಟು ಹೆಚ್ಚಳ ಕಂಡಿದ್ದು ವಿಶೇಷ.

ಮತ್ತಷ್ಟು ಕುಸಿದ ಬೆಳ್ಳಿ ಬೆಲೆ

ಬೆಳ್ಳಿಯ ಬೆಲೆ ಗುರುವಾರ 4,900 ರೂ.ನಷ್ಟು ಕಡಿಮೆಯಾಗಿ ಕೆಜಿಗೆ 90,900 ರೂ.ಗೆ ತಲುಪಿತು. ಚಿನ್ನದ ಬೆಲೆ ರಾಷ್ಟ್ರ ರಾಜಧಾನಿಯಲ್ಲಿ 100 ರೂ.ನಷ್ಟು ಇಳಿಕೆಯಾಗಿ 10 ಗ್ರಾಂಗೆ 78,700 ರೂ.ಗೆ ಸ್ಥಿರಗೊಂಡಿತು. ಶೇ. 99.5 ಶುದ್ಧತೆಯ ಚಿನ್ನ 400 ರೂ.ನಷ್ಟು ಕಡಿಮೆಯಾಗಿ 10 ಗ್ರಾಂಗೆ 78,300 ರೂ.ಗೆ ತಲುಪಿತು. ಬುಧವಾರ ಶೇ. 99.9 ಶುದ್ಧತೆ ಮತ್ತು ಶೇ. 99.5 ಶುದ್ಧತೆಯ ಚಿನ್ನದ ಬೆಲೆ ಕ್ರಮವಾಗಿ 10 ಗ್ರಾಂಗೆ 78,800 ರೂ. ಮತ್ತು 78,700 ರೂ. ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net