‘ಸಿಲ್ಕ್ ಇಂಡಿಯ-2024’ ಪ್ರದರ್ಶನ ಮತ್ತು ಮಾರಾಟ ಮೇಳ

19
Published on

ಹಬ್ಬ ಬಂತು ಅಂದರೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಂತೋಷ. ಹಬ್ಬಗಳಿಗೆ ಮೆರಗು ನೀಡುವುದು ಮನಮೋಹಕ ಬಣ್ಣ ವಿನ್ಯಾಸಗಳ ಸೀರೆ, ಬಟ್ಟೆಗಳು. ಅದಕ್ಕಾಗಿಯೇ ಸುಂದರ ಸೀರೆಗಳೆಂದರೆ ಪಂಚಪ್ರಾಣ ಅಂತಾರೆ ನಮ್ಮ ಮೈಸೂರಿನ ನೀರೆಯರು.

ಹೆಂಗಳೆಯರ ಮನತಣಿಸಲು ದೀಪಾವಳಿ ಹಬ್ಬದ ಪ್ರಯುಕ್ತ ನಿಮಿತ್ತ ‘ಸಿಲ್ಕ್ ಇಂಡಿಯಾ’ ವಿವಿಧ ಬಗೆಯ ರೇಷ್ಮೆ ಸೀರೆಗಳ ಮಾರಾಟ ಆರಂಭಿಸಿದೆ ಅದೂ ರಿಜೀನೆಬಲ್ ದರದಲ್ಲಿ. ನಗರದ ವಿನೋಬಾ ರಸ್ತೆಯ ನಂಜರಾಜ ಬಹದ್ದೂರ್ ಛತ್ರದಲ್ಲಿ ‘ಸಿಲ್ಕ್ ಇಂಡಿಯ-2024’ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಅ.18 ರಿಂದ 27 ರವರೆಗೆ ನಡೆಯಲಿದೆ. ಬೆ.10.30 ರಿಂದ ಸಂಜೆ 8.30 ಸಾರ್ವಜನಿಕರು ಭೇಟಿ ನೀಡಬಹುದಾಗಿದೆ.

ನೋಡಿದ ಕೊಡಲೇ ಮನಸ್ಸು ಒಪ್ಪುವಂತಹ ಬಟ್ಟೆ ಸಿಗಲಿದೆ. ಎಷ್ಟು ಕೊಂಡರೂ ಇನ್ನೂ ಬೇಕು ಎನ್ನುವ ಹಂಬಲ ಉಂಟಾಗಲಿದೆ. ಎಲ್ಲ ಬಗೆಯ ಕಲರ್, ಕ್ವಾಲಿಟಿ ಸಿಲ್ಕ್ ಸೀರೆಗಳು ಲಭ್ಯ ಇರಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net