

ದಕ್ಷಿಣ ಭಾರತ ಚಿತ್ರರಂಗದ ಪ್ರತಿಷ್ಠಿತ ಸೈಮಾ-2024 (ಸೌತ್ ಇಂಡಿಯಾ ಇಂಟರ್‌ನ್ಯಾಷನಲ್ ಮೂವೀ ಅವಾರ್ಡ್ಸ್) ಪ್ರಶಸ್ತಿ ಪ್ರದಾನ ಸಮಾರಂಭವು ಅರಬ್ಬರ ನಾಡು ದುಬೈನಲ್ಲಿ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯ ಚಿತ್ರಗಳನ್ನು ವಿವಿಧ ವಿಭಾಗಗಳಲ್ಲಿ ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಮಾರಂಭದಲ್ಲಿ ಬಾಲಿವುಡ್ ಸೇರಿ ದಕ್ಷಿಣ ಭಾರತ ವಿವಿಧ ಚಿತ್ರರಂಗದ ಬೋನಿ ಕಪೂರ್, ಅಲ್ಲು ಅರವಿಂದ್, ಕಬೀರ್ ಖಾನ್, ರವಿಶಂಕರ್, ರಾನಾ ದಗ್ಗುಬಾಟಿ, ಶ್ರುತಿ ಹಾಸನ್ ಸೇರಿ ಖ್ಯಾತ ನಟರು, ನಟಿಯರು ಭಾಗಿಯಾಗಿ ಸೈಮಾ ಮೆರುಗು ಹೆಚ್ಚಿಸಿದರು.
ಸ್ಯಾಂಡಲ್‌ವುಡ್‌ನಿಂದ ಯಾರೆಲ್ಲ ಭಾಗಿ: ಸೈಮಾ-2024ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಂದನವನ ನಟರಾದ ಡಾ.ಶಿವರಾಜಕುಮಾರ್, ಸುದೀಪ್, ವಿಜಯ್ ಕುಮಾರ್, ರಾಕ್‌ಲೈನ್ ವೆಂಕಟೇಶ್, ಧನಂಜಯ್, ರಕ್ಷಿತ್ ಶೆಟ್ಟಿ, ನಟಿಯರಾದ ರುಕ್ಮಿಣಿ ವಸಂತ್, ಸಾನ್ವಿ ಶ್ರೀವತ್ಸ ಸೇರಿ ಹಲವರು ಭಾಗಿಯಾಗಿದ್ದಾರೆ. -ಏಜೆನ್ಸೀಸ್
‘ಸಪ್ತ ಸಾಗರದಾಚೆ….’, ‘ಕಾಟೇರ’ನಿಗೆ ಬಹುಪಾಲು’:
ಪ್ರಶಸ್ತಿ ಸುತ್ತಿನ ವಿವಿಧ 19 ವಿಭಾಗಗಳಲ್ಲಿ ಹೇಮಂತ್ ರಾವ್- ರಕ್ಷಿತ್ ಶೆಟ್ಟಿ ಕಾಂಬಿನೇಷನ್‌ನ ‘ಸಪ್ತ ಸಾಗರದಾಚೆ ಎಲ್ಲೋ- ಸೈಡ್-ಎ’ ಸಿನಿಮಾಕ್ಕೆ ಆರು ಹಾಗೂ ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ಗೆ ನಾಲ್ಕು ಪ್ರಶಸ್ತಿಗಳನ್ನು ಪಡೆದುಕೊಂಡಿವೆ.
ಪ್ರಶಸ್ತಿ ಪಡೆದು ಚಿತ್ರಗಳ ವಿವರ: