

ರಾಣೆಬೆನ್ನೂರ: ಗ್ರಾಮೀಣ ಭಾಗದಿಂದ ಜನರು ಅಲೆದಾಡುವುದನ್ನು ತಪ್ಪಿಸಲು ಪ್ರಾಯೋಜಕತ್ವ ಯೋಜನೆಯ ವಿದ್ಯಾಥಿರ್ವೇತನ ಅಜಿರ್ಗಳನ್ನು ಜಿಲ್ಲಾ ಕೇಂದ್ರ ಹಾವೇರಿಯಲ್ಲಿಯೂ ತೆಗೆದುಕೊಂಡು ಫಲಾನುಭವಿ ಪೋಷಕರು ಹಾಗೂ ವಿದ್ಯಾಥಿರ್ಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿ ಡಿವೈಎಫ್ಐ ವತಿಯಿಂದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಜಿಲ್ಲಾಧ್ಯಕ್ಷ ಎಚ್. ಮಜೀದ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಸಂಟನೆಯ ರಾಜ್ಯ ಕಾರ್ಯದಶಿರ್ ಬಸವರಾಜ ಪೂಜಾರ ಮಾತನಾಡಿ, ಅನಾಥ ಮಕ್ಕಳು, ಪೋಷಕರು, ಜೈಲಿನಲ್ಲಿರುವವರ ಮಕ್ಕಳು, ಲೈಂಗಿಕ ಕಾರ್ಯಕರ್ತೆಯರು, ದೇವದಾಸಿ ಪದ್ದತಿಗೆ ಒಳಗಾಗಿರುವ ಮಕ್ಕಳ ಶಿಕ್ಷಣಕ್ಕಾಗಿ ನೀಡುವ ವಿದ್ಯಾಥಿರ್ವೇತನ, ಧನಸಹಾಯ ಯೋಜನೆಯ ಅಜಿರ್ಗಳನ್ನು ರಾಣೆಬೆನ್ನೂರಿನಲ್ಲಿರುವ ಬಾಲಕರ ಸರ್ಕಾರಿ ಬಾಲ ಮಂದಿರದಲ್ಲಿ ಸ್ವೀಕರಿಸಲಾಗುತ್ತಿದೆ.
ಜಿಲ್ಲೆಯ ಎಲ್ಲ ತಾಲೂಕಿನಿಂದ ಈ ಯೋಜನೆಗೆ ಅಜಿರ್ ಸಲ್ಲಿಸಲು ರಾಣೆಬೆನ್ನೂರಿಗೆ ಬಂದು ಹೋಗಲು ಅದರಲ್ಲೂ ಸವಣೂರ, ಶಿಗ್ಗಾಂವಿ, ಹಾನಗಲ್ಲ ಸೇರಿ ದೂರದ ತಾಲೂಕಿನ ಬಡ ಪೋಷಕರು ಹಾಗೂ ವಿದ್ಯಾಥಿರ್ಗಳಿಗೆ ತೊಂದರೆಯುಂಟಾಗಿದೆ. ಆದ್ದರಿಂದ ಎಲ್ಲರಿಗೂ ಬಂದು ಹೋಗಲು ಅನುಕೂಲವಿರುವ ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಚೇರಿಯಲ್ಲಿ ಪ್ರಾಯೋಜಕತ್ವ ಯೋಜನೆಯ ಫಲಾನುಭವಿಗಳ ಅಜಿರ್ಗಳನ್ನು ಸ್ವೀಕರಿಸಲು ತಾವುಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.