

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಮೂರುವರೆ ದಶಕದಿಂದ ಸಿಗರೇಟ್ ಮುಟ್ಟಿಲ್ಲ. ಅಂದರೆ ಸಿಗರೇಟ್ ಪ್ರೇಮಿಯಾಗಿದ್ದ ಸಿದ್ದರಾಮಯ್ಯ, 1987ರಿಂದ ಸಿಗರೇಟ್ ಸೇದುವುದನ್ನು ಬಿಟ್ಟರು. ಮತ್ತು ಮುಂದೆಂದೂ ಸೇದುವುದಿಲ್ಲಿ ಎಂದು ನಿರ್ಣಯಿಸಿದರಂತೆ.
ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರೇ ಈ ಸಂಗತಿ ಹೇಳಿಕೊಂಡರು. ನಾನು ವಿದ್ಯಾರ್ಥಿಯಾಗಿದ್ದಾಗ ಸಿಗರೇಟ್ ಸೇದುತ್ತಿದ್ದೆ. ಒಮ್ಮೆ ವಿದೇಶಕ್ಕೆ ಹೋಗಿ ಬಂದ ಸ್ನೇಹಿತರು ಒಂದು ಬಾಕ್ಸೃ್ ಸಿಗರೇಟ್ ತಂದಿದ್ದರು. ಅಷ್ಟನ್ನೂ ಸೇದಿ ಮುಗಿಸಿದ್ದೆ. ಬಳಿಕ ಕಡಿಮೆ ಅವಧಿಯಲ್ಲಿ ಇಷ್ಟೆಲ್ಲ ಸೇದಿದ್ದೇನೆ, ರೋಗ ಗ್ಯಾರಂಟಿ ಎಂದು ಅರಿವಾಯಿತು. ಹೀಗಾಗಿ ಸೇದಬಾರದೆಂದು ನಿರ್ಧರಿಸಿದೆ. 1987 ಆಗಸ್ಟ್ 20ರಿಂದ ಇವತ್ತಿನ ವರೆಗೂ ಸಿಗರೇಟ್ ಮುಟ್ಟಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.