

ರಾಣೆಬೆನ್ನೂರ: ತಾಲೂಕಿನ ಕಜ್ಜರಿ ಗ್ರಾಮದ ನಿವಾಸಿ ಹಾಗೂ ಸಹಾಯಕ ಪ್ರಾಧ್ಯಾಪಕ ಸುದೀಶ ಕುಲಕಣಿರ್ ಅವರಿಗೆ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಪಿಎಚ್.ಡಿ ಪ್ರದಾನ ಮಾಡಿದೆ.
ಇವರು ಉಪನ್ಯಾಸಕ ಡಾ. ಎಸ್.ಕೆ. ಹೆಗಡೆ ಅವರ ಮಾರ್ಗದರ್ಶನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರಿಮೆಣಸಿನ ಪ್ರಭೇದಗಳ ಹೊಸ ವಿಜ್ಞಾನ ಹಾಗೂ ಆಶ್ಪಿಕ ಗುಣ ಲಕ್ಷಣ ಮತ್ತು ನಕಾಲಮಾಪನ ಎಂಬ ವಿಷಯ ಕುರಿತು ಪ್ರಬಂಧ ಮಂಡಿಸಿದ್ದರು.