

ನೆಲಮಂಗಲ: ತಮ್ಮ ಜೀವನವೇ ಸಂದೇಶ ಎಂಬಂತೆ ಬದುಕಿ ಶ್ರೀಡಾ.ಶಿವಕುಮಾರ ಸ್ವಾಮೀಜಿ ಮಾದರಿಯಾಗಿದ್ದಾರೆ ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀಸಿದ್ದಲಿಂಗಸ್ವಾಮೀಜಿ ತಿಳಿಸಿದರು. ನೆಲಮಂಗಲ ನಗರದ ಪವಾಡ ಶ್ರೀಬಸವಣ್ಣ ದೇವರ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಸಿದ್ಧಗಂಗಾ ಶ್ರೀಗಳ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಭೂಮಿಯ ಮೇಲೆ ಜನಿಸಿದ್ದ ಪ್ರತಿಯೊಬ್ಬರಿಗೂ ನಾಮಕರಣ ಮಾಡಿ ಹೆಸರು ನೀಡಲಾಗುತ್ತಿದೆ. ಆದರೆ ಸಮಾಜದಲ್ಲಿ ಲಿಂಗೈಕ್ಯದ ಬಳಿಕವೂ ಶಾಶ್ವತವಾಗಿ ಹೆಸರು ಉಳಿಸಿಕೊಳ್ಳುವುದು ಕೆಲವರು ಮಾತ್ರ. ಮನುಷ್ಯನ ಆಯಸ್ಸು 120ವರ್ಷ. ಆದರೆ ಪ್ರಸ್ತುತ ಸಮಾಜದಲ್ಲಿ ಬದಲಾವಣೆ, ಅಹಾರ ಪದ್ದತಿ ಸೇರಿ ಪರಿಸರ ಮಾಲಿನ್ಯದಿಂದ ಆಯಸ್ಸು ಕ್ಷೀಣಿಸುತ್ತಿದೆ. 80 ವರ್ಷ ಮಠದ ಜವಾಬ್ದಾರಿ ನಿಭಾಯಿಸಿ ಲಕ್ಷಾಂತರ ಜನರಿಗೆ ಶ್ರೀಗಳು ದಾರಿ ದೀಪವಾಗಿದ್ದಾರೆ ಎಂದರು. ಡಾ.ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆ ಪ್ರಯುಕ್ತ ಶ್ರೀಗಳ ಭಾವಚಿತ್ರಕ್ಕೆ ವಿಶೇಷ ಪೂಜೆಸಲ್ಲಿಸಿ ಪುಷ್ಪನಮನ ಸಲ್ಲಿಸಲಾಯಿತು. ವೀರಶೈವ ಮಹಾಸಭಾ ಗ್ರಾಮಾಂತರ ಜಿಲ್ಲಾಧ್ಯಕ್ಷ ರೇವಣ್ಣಸಿದ್ದಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್, ನಿರ್ದೇಶಕಿ ರಾಜಮ್ಮಪ್ರಕಾಶ್, ಮಹಿಳಾ ಘಟಕ ತಾಲೂಕು ಅಧ್ಯಕ್ಷೆ ವೇದಾವತಿ, ತಾಲೂಕುಮಾಜಿಅದ್ಯಕ್ಷ ಶಾಂತಕುಮಾರ್, ವೀರಶೈವ ಬ್ಯಾಂಕ್ ಅಧ್ಯಕ್ಷ ಎಂ.ಜಿ.ಲೋಕೇಶ್, ಮುಖಂಡ ಕೆ.ಬಿ.ಬೃಂಗೇಶ್, ಶಾಂತಕುಮಾರ್, ಗಿರೀಶ್ ಉಪಸ್ಥಿತರಿದ್ದರು.
ನೆಲಮಂಗಲ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಆಯೋಜಿಸಿದ್ದ ಲಿಂಗೈಕ ಶ್ರೀ ಡಾ.ಶಿವಕುಮಾರ ಸ್ವಾಮೀಜಿ 6ನೇ ಪುಣ್ಯ ಸ್ಮರಣೆ ಹಾಗೂ ದಾಸೋಹ ದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಪವಾಡ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ, ಮಂಗಳೂರು ಜಂಗಮ ಮಠದ ಶ್ರೀರುದ್ರಮುನಿ ಸ್ವಾಮೀಜಿ, ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು, ಸದಸ್ಯೆ ಲೋಕಾಕ್ಷಿಗಂಗಾಧರ್ ಇದ್ದರು.