ಹಾಗಲಮನೆ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಸಂಪನ್ನ

nrp sideheswara
ಎನ್.ಆರ್.ಪುರ ತಾಲೂಕು ಹಾಗಲಮನೆ ಶ್ರೀ ಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.
Published on

ಎನ್.ಆರ್.ಪುರ: ತಾಲೂಕಿನ ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ಹಾಗಲಮನೆ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ಸೋಮವಾರ ಸಂಪನ್ನಗೊಂಡಿತು.
ಜಾತ್ರೆ ಪ್ರಯುಕ್ತ ಭಾನುವಾರ ಧ್ವಜಾರೋಹಣ ನೆರವೇರಿಸಲಾಗಿತ್ತು. ಸಂಜೆ ಕೋಡಿಹಳ್ಳಿಯಿಂದ ಜ್ಯೋತಿ ತಂದು ದೇವಾಲಯದಲ್ಲಿ ಪ್ರಜ್ವಲಿಸಲಾಯಿತು. ಮೇದರಬೀದಿ ಅಂತರಘಟ್ಟಮ್ಮ ದೇವಿಯನ್ನು ಪಲ್ಲಕ್ಕಿ ಮೂಲಕ ದೇವಾಲಯಕ್ಕೆ ತರಲಾಯಿತು.
ಸೋಮವಾರ ಬೆಳಗ್ಗೆ 9 ಗಂಟೆಗೆ ದೇವಾಲಯದ ಪರಿವಾರ ದೇವರುಗಳಾದ ಬೀರಲಿಂಗೇಶ್ವರ, ಬಸವೇಶ್ವರ, ನಾಗದೇವತೆ, ಕೆಂಚರಾಯಸ್ವಾಮಿ, ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಅಭಿಷೇಕ, ವಿಶೇಷ ಅಲಂಕಾರದೊಂದಿಗೆ ಪೂಜೆ ಸಲ್ಲಿಸಲಾಯಿತು. ದೇವಾಲಯದ ಆವರಣದಲ್ಲಿ ಮಹಾಗಣಪತಿ ಹೋಮ, ವಾಸ್ತು ಹೋಮ, ರುದ್ರಹೋಮ, ಮೃತ್ಯುಂಜಯ ಹೋಮದೊಂದಿಗೆ ಪೂರ್ಣಾಹುತಿ ಜರುಗಿತು. ಮಂಗಳವಾರ ಬೆಳಗ್ಗೆ ಕೆಂಡಾರ್ಚನೆ ನಡೆಯಿತು.
ಬಾಳೆಹೊನ್ನೂರು ರಂಭಾಪುರಿ ಪೀಠದ ಬಸವರಾಜ್ ಶಾಸಿ, ಬೆಂಗಳೂರಿನ ರಾಜಶೇಖರ ಶಾಸಿ,, ಚನ್ನಗಿರಿಯ ರುದ್ರೇಶ್ ಶಾಸಿಗಳ ನೇತೃತ್ವವದಲ್ಲಿ ಹೋಮ, ಹವನ, ಪೂಜಾ ಕೈಂಕರ್ಯ ಜರುಗಿದವು. ದೇವಸ್ಥಾನದ ಅರ್ಚಕ ನಾಗರಾಜ್, ರುದ್ರೇಶ್, ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ಮೋಹನ್, ಕಾರ್ಯದರ್ಶಿ ವೆಂಕಟೇಶ್, ಖಜಾಂಚಿ ಕೃಷ್ಣಮೂರ್ತಿ, ಸವಿತಾ, ವಿಂದ್ಯಾಹೆಗ್ಡೆ, ವಿಜೇಂದ್ರ, ಕೆ.ಎಸ್.ಕೃಷ್ಣಮೂರ್ತಿ, ಲೋಕೇಶ್, ಸತೀಶ್, ರವಿಕುಮಾರ್, ಸುರೇಶ್ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net