ಸಿದ್ದರಾಮಯ್ಯ ಪಕ್ಷ ತೊರೆದವರನ್ನು ಪುನಃ ಸೇರಿಸಿಕೊಳ್ಳಲ್ಲ ಅಂದಿದ್ದರು, ಇವತ್ತಿನ ಕಾಲಕ್ಕೆ ನಿರ್ಧಾರ ಬದಲಾಗಿದೆ!

Ramalinga Reddy
Published on

ಬೆಂಗಳೂರು: ತಮ್ಮ ಪಕ್ಷ ಬಿಟ್ಟು ಬಿಜೆಪಿಗೆ ತೆರಳಿದವರು ಪುನಃ ಕಾಂಗ್ರೆಸ್‌ಗೆ ಮರಳಿದರೆ ಚುನಾವಣೆಯಲ್ಲಿ ಅನುಕೂಲವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದರೆ ಪಕ್ಷಕ್ಕೆ ಅನುಕೂಲವಾಗಲಿದೆ. ಯಾರ್ಯಾರು ಬಿಜೆಪಿಗೆ ಹೋಗಿದ್ದರೋ ಅವರೆಲ್ಲಾ ಬಂದರೆ ಸಹಕಾರಿಯಾಗಲಿದೆ. ಲೋಕಸಭೆ, ಬಿಬಿಎಂಪಿ ಎರಡೂ ಚುನಾವಣೆಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಕಾಲ ಬದಲಾವಣೆ ಆಗ್ತಾ ಹೋಗತ್ತೆ ನಿರ್ಧಾರಗಳೂ ಬದಲಾಗತ್ತದೆ. ಸಿದ್ದರಾಮಯ್ಯ ಅವತ್ತಿನ ಸಂದರ್ಭಕ್ಕೆ ಸೇರಿಸಿಕೊಳ್ಳೋದಿಲ್ಲ ಅಂದಿದ್ದರು, ಆದರೆ ಇವತ್ತಿನ ಕಾಲಕ್ಕೆ ನಿರ್ಧಾರ ಬದಲಾಗಿದೆ. ಅವರೆಲ್ಲಾ ತಪ್ಪು ತಿಳುವಳಿಕೆಯಿಂದ ಬಿಜೆಪಿಗೆ ಹೋಗಿದ್ದರು ಎಂದರು.

ಪಕ್ಷ ಬಿಟ್ಟು ಹೋದವರಿಗೆ ಕಾಂಗ್ರೆಸ್ ಪಕ್ಷವೇ ಸರಿ ಅಂತ ಅನ್ನಿಸಿದೆ. ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ. ಬಿಜೆಪಿಯಲ್ಲಿ ಬೋನಿನಲ್ಲಿ ಹಾಕಿದಂತೆ ಇರುತ್ತದೆ. ಬಿಜೆಪಿಯವರಿಗೆ ಅಲ್ಲಿನ ವಾತಾವರಣ ರೂಢಿಯಾಗಿದೆ. ಇಲ್ಲಿಂದ ಹೋದ ನಮ್ಮವರಿಗೆ ಅದು ಇನ್ನೂ ರೂಢಿ ಇಲ್ಲ. ಬಿಜೆಪಿಯಲ್ಲಿ ಹಕ್ಕಿಗಳನ್ನು ಗೂಡಿನಲ್ಲಿ ಹಾಕಿದಂತೆ ಇಟ್ಟಿರುತ್ತಾರೆ. ನಮ್ಮಲ್ಲಿ ಹಕ್ಕಿಗಳು ಸ್ವತಂತ್ರವಾಗಿ ಹಾರಾಡಿಕೊಂಡಿರುತ್ತವೆ ಎಂದು ವ್ಯಾಖ್ಯಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net