ಇದೇ ನೋಡಿ ನಮ್ಮ Someಕಲ್ಪ: ಮಾಜಿ ಸಿಎಂ ಸಿದ್ದರಾಮಯ್ಯ ಏನು ಮಾಡಬಹುದು...

Siddaramaiah 1 jan 20
Published on

ನೂತನ ವರ್ಷ ಆರಂಭವಾಗುವ ಸಂದರ್ಭದಲ್ಲಿ ಎಲ್ಲರೂ ಏನಾದರೊಂದು ನಿರ್ಣಯ ಕೈಗೊಳ್ಳುವುದು ರೂಢಿ. ಇದಕ್ಕೆ ರಾಜಕಾರಣಿಗಳು, ಕ್ರೀಡಾಪಟುಗಳು, ಸಿನಿಮಾರಂಗದ ಸೆಲೆಬ್ರಿಟಿಗಳು ಮುಂತಾಗಿ ಯಾರೂ ಹೊರತಲ್ಲ. 2020ರ ಹೊಸ್ತಿಲಲ್ಲಿ ಯಾರ್ಯಾರು ಏನೇನು ಸಂಕಲ್ಪ ಮಾಡಿರಬಹುದು ಎಂಬುದನ್ನು ಕನ್ನಡದ ಖ್ಯಾತ ಹಾಸ್ಯ ಸಾಹಿತಿ, ‘ವಿಜಯವಾಣಿ’ಯ ಅಂಕಣಕಾರ ಎಚ್. ಡುಂಡಿರಾಜ್ Fun ಶೈಲಿಯಲ್ಲಿ ಹೇಳ್ತಾ ಇದ್ದಾರೆ, ಕೇಳೋಣ ಬನ್ನಿ.

ಸಿದ್ದರಾಮಯ್ಯ

ಏನಂದ್ರಿ? ಹೊಸ ವರ್ಷದ ಸಂಕಲ್ಪವಾ? ಸಣ್ ಕಲ್ಪವೂ ಇಲ್ಲ, ದೊಡ್ ಕಲ್ಪವೂ ಇಲ್ಲ. ನಾನು ಏನು ಹೇಳಿದರೂ ಅದು ನನಗೇ ಉಲ್ಟಾ ಹೊಡೀತಿದೆ. ಕುಮಾರಸ್ವಾಮಿ, ಯಡಿಯೂರಪ್ಪ ಅವರಪ್ಪನಾಣೆಗೂ ಸಿಎಂ ಆಗಲ್ಲ ಅಂದಿದ್ದೆ. ಇಬ್ರೂ ಆದರು. ಆದ್ರಿಂದ ಈ ವರ್ಷ ಯಾವ ಚುನಾವಣೆಯಲ್ಲೂ ಅಪ್ಪನಾಣೆ ಅನ್ನೋಲ್ಲ. ಮೋದಿ ವಿರುದ್ಧದ ಹೋರಾಟಕ್ಕೆ ತಾತ್ಕಾಲಿಕ ಕದನ ವಿರಾಮ ಘೊಷಿಸಿದ್ದೇನೆ. ಯಾಕಂದ್ರೆ ನಮ್ಮ ಪಕ್ಷದ ಶತ್ರುಗಳ ಜೊತೆಗೆ ಗುದ್ದಾಡುವುದರಲ್ಲೆ ನನ್ನ ಶಕ್ತಿ ಸೋರಿ ಹೋಗ್ತಿದೆ. ನನ್ನಪ್ಪನಾಣೆಗೂ ಇದಕ್ಕಿಂತ ಹೆಚ್ಚು ನಾನೇನೂ ಹೇಳೋಲ್ಲ. ಯಾಕಂದ್ರೆ ಈ ಕುರುಚಲು ಗಡ್ಡ ಮಾತ್ರ ನಾನು ಬಿಟ್ಟದ್ದು. ಮಿಕ್ಕ ಎಲ್ಲಾ ವಿಚಾರ ಹೈಕಮಾಂಡಿಗೆ ಬಿಟ್ಟದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net