ಸಿದ್ದಾಪುರ ಬಂಡಿ ಅಮ್ಮನ ಉತ್ಸವ ಸಂಪನ್ನ

12ss2puje
ದೇವಸ್ಥಾನದಲ್ಲಿ ಪೂಜಾ ಕಾರ್ಯಗಳು
Published on

ಶನಿವಾರಸಂತೆ: ಸಮೀಪದ ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಶ್ರೀ ಬಂಡಿ ಅಮ್ಮನವರ ವಾರ್ಷಿಕ ಪೂಜಾ ಮಹೋತ್ಸವ ಸೋಮವಾರ ಸಂಪನ್ನಗೊಂಡಿತು.

ಸಂಜೆ 7.30 ಕ್ಕೆ ಬಂಡಿ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ಬಂಡಿ ಅಮ್ಮನವರಿಗೆ ಅಲಂಕಾರ, ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ದೇವಿಗೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮುಂಜಾನೆ 4 ಗಂಟೆಗೆ ಗ್ರಾಮದಲ್ಲಿ ನೂತನವಾಗಿ ವಿವಾಹವಾದ ದಂಪತಿಯನ್ನು ಬಂಡಿಯಲ್ಲಿ ಕೂರಿಸಿದ ಗ್ರಾಮಸ್ಥರು ಬಂಡಿಯನ್ನು ದೇವಸ್ಥಾನದವರೆಗೆ ಎಳೆದುಕೊಂಡು ಬಂದು ಮೂರು ಪ್ರದಕ್ಷಣೆ ಹಾಕಿದರು. ನಂತರ ದೇವಸ್ಥಾನದಲ್ಲಿ ದೇವಿಗೆ ಎಡೆ ಪೂಜೆ ಸಮರ್ಪಿಸಲಾಯಿತು. ಬೆಳಗ್ಗೆ 7.30 ಕ್ಕೆ ದೇವಿಗೆ ಭಕ್ತರಿಂದ ಹಣ್ಣು ಕಾಯಿ ಪೂಜೆ ಮತ್ತು ಅರ್ಚಕರಿಂದ ದೇವಿಗೆ ಮಹಾಮಂಗಳಾರತಿ ಪೂಜೆ, ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಶ್ರೀ ಬಂಡಿ ಅಮ್ಮನವರ ವಾರ್ಷಿಕ ಪೂಜಾ ಮಹೋತ್ಸವ ಸಂಪನ್ನಗೊಂಡಿತು.

ವಾರ್ಷಿಕ ಪೂಜಾ ಮಹೋತ್ಸವ ಪ್ರಯುಕ್ತ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಪೂಜಾ ಮಹೋತ್ಸವದಲ್ಲಿ ಗ್ರಾಮಸ್ಥರು, ಭಕ್ತರು ಪಾಲ್ಗೊಂಡಿದ್ದರು. ಅರ್ಚಕರಾದ ಜಗದೀಶ್, ಶೇಖರ್ ಪೂಜಾ ವಿದಿ ವಿಧಾನ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net