ಕಲಾಗ್ರಾಮದಲ್ಲಿ ಕವಿ ಸಿದ್ದಲಿಂಗಯ್ಯರ ಅಂತ್ಯಕ್ರಿಯೆಗೆ ಸಿಎಂ ಬಿಎಸ್​ವೈ ಸ್ಪಂದನೆ: ನಾಳೆ ಅಂತಿಮ ವಿಧಿ-ವಿಧಾನ

Siddalingaiah
Published on

ಬೆಂಗಳೂರು: ಮಹಾಮಾರಿ ಕರೊನಾ ಸೋಂಕಿನಿಂದ ಇಂದು ವಿಧಿವಶರಾದ ದಲಿತ ಕವಿ ಡಾ. ಸಿದ್ದಲಿಂಗಯ್ಯ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ (ಜೂ. 12) ನೆರವೇರಲಿದೆ.

ಕೆಲ ಹೊತ್ತಲ್ಲಿ ಆಸ್ಪತ್ರೆಯಿಂದ ಕುಟುಂಬಕ್ಕೆ ಪಾರ್ಥಿವ ಶರೀರ ಹಸ್ತಾಂತರವಾಗಿದ್ದು, ಆರ್ ಆರ್ ನಗರದ ನಿವಾಸಕ್ಕೆ ಸಿದ್ದಲಿಂಗಯ್ಯರ ಪಾರ್ಥಿವ ಶರೀರ ರವಾನೆಯಾಗಿದೆ.

ಕಲಾಗ್ರಾಮ, ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಅಂತ್ಯಸಂಸ್ಕಾರ ಮಾಡುವಂತೆ ಸಿದ್ದಲಿಂಗಯ್ಯರ ಸ್ನೇಹಿತರು ಸರ್ಕಾರಕ್ಕೆ ಒತ್ತಾಯ ಮಾಡಲು ನಿರ್ಧರಿಸಿದ್ದಾರೆ. ಸರ್ಕಾರ ಒಪ್ಪಿಕೊಂಡರೆ ಬೆಂಗಳೂರಲ್ಲೇ ಅಂತ್ಯಸಂಸ್ಕಾರ ನೆರವೇರಲಿದೆ. ಇಲ್ಲದಿದ್ದರೆ, ಮಾಗಡಿಯಲ್ಲಿನ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

ಶ್ರೀರಾಮುಲು ಟ್ವೀಟ್​

ಅಂತ್ಯಸಂಸ್ಕಾರ ಕುರಿತು ಟ್ವೀಟ್​ ಮಾಡಿರುವ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಸಿದ್ದಲಿಂಗಯ್ಯರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಗರದ ಕಲಾಗ್ರಾಮದಲ್ಲಿ ನೆರವೇರಿಸುವಂತೆ ಮಾಡಿದ ಮನವಿಗೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಸ್ಪಂದಿಸಿದ್ದು, ನಾಳೆ ಅಂತಿಮ ವಿಧಿ-ವಿಧಾನಗಳು ನೆರವೇರಲಿವೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net