ಸಿದ್ದಗಂಗಾ ಮಠಕ್ಕೆ ಬಂದಾಗ ಶ್ರೀಗಳು ಇಲ್ಲದ ಪರಿಣಾಮ ನನ್ನಲ್ಲಿ ಶೂನ್ಯ ಭಾವನೆ ಆವರಿಸಿತು: ಪ್ರಧಾನಿ ಮೋದಿ ಮನದಾಳದ ಮಾತು

Modi at tumkur 2 JAN 20
Published on

ತುಮಕೂರು: ಡಾ. ಶಿವಕುಮಾರ ಸ್ವಾಮೀಜಿ ಅವರು ಸಾವಿರಾರು ಮಂದಿ ವಿದ್ಯಾರ್ಥಿಗಳ ಬಾಳನ್ನು ಬೆಳಗಿಸಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನುಡಿದರು.

ಸಿದ್ದಗಂಗಾ ಮಠದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಾತಿಯನ್ನು ನೋಡದೆ ಮಠದಲ್ಲಿ ವಿದ್ಯಾರ್ಥಿಗಳಿಗೆ ಆಶ್ರಯ ನೀಡುತ್ತಿದ್ದಾರೆ. ಮಠದಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಂಡಿದ್ದಾರೆ. ಮಠಕ್ಕೆ ಬಂದಾಗ ನನ್ನನ್ನು ಶೂನ್ಯ ಭಾವ ಕಾಡುತ್ತಿತ್ತು. ಶಿವಕುಮಾರ ಸ್ವಾಮೀಜಿಗಳು ಇಲ್ಲದ ಹಿನ್ನೆಲೆಯಲ್ಲಿ ಶೂನ್ಯ ಭಾವ ಕಾಡುತ್ತಿದೆ ಎಂದು ಹೇಳಿದರು.

ಜಮ್ಮು ಕಾಶ್ಮೀರದಲ್ಲಲಿ ಇದ್ದ 370ನೇ ವಿದಿಯನ್ನು ರದ್ದುಗೊಳಿಸಿ ಅಲ್ಲಿ ಅಭಿವೃದ್ಧಿಯನ್ನು ಜಾರಿಗೊಳಿಸಿದ್ದೇವೆ. ಜಮ್ಮು-ಕಾಶ್ಮೀರದ ವಿಕಾಸಕ್ಕೆ ನಾಂದಿಯಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ತಡೆ ಇಲ್ಲದೆ ನಡೆಯಲಿದೆ. ರಾಷ್ಟ್ರದಲ್ಲಿ 2014ರಿಂದ ಬದಲಾವಣೆಯ ಪರ್ವವೇ ಆರಂಭವಾಗಿದೆ. ಇದಕ್ಕೆ ಭಾರತೀಯರು ನನಗೆ ನೀಡಿದ ಬೆಂಬಲ ಕಾರಣ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net