

ತುಮಕೂರು: ಬೆಳಗಾವಿಯ ಶಿವಾನಂದ ಚಿಗಾರಿ ಪುರುಷರ ಹಾಗೂ ಬೆಂಗಳೂರಿನ ಎನ್. ಮೇಘಶ್ರೀ ಮಹಿಳೆಯರ ವಿಭಾಗದಲ್ಲಿಸಿದ್ದಗಂಗಾ ಹೆಲ್ತ್ ರನ್ 10 ಕೆ ಮ್ಯಾರಥಾನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ನಗರದ ಸಿದ್ದಗಂಗಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಭಾನುವಾರ ವಿಶ್ವ ಹೃದಯದ ದಿನದ ಅಂಗವಾಗಿ ಆಯೋಜಿಸಿದ್ದ ಸಿದ್ದಗಂಗಾ ಹೆಲ್ತ್ ರನ್ 10 ಕೆ ಮ್ಯಾರಥಾನ್ನ ಪುರಷರ ವಿಭಾಗದಲ್ಲಿ ಶಿವಾನಂದ ಚಿಗಾರಿ 33.01 ನಿಮಿಷದಲ್ಲಿ 10 ಕಿ.ಮೀ., ಪೂರೈಸಿ ಪ್ರಥಮ ಸ್ಥಾನದೊಂದಿಗೆ 15 ಸಾವಿರ ರೂ., ನಗದು, ಚಿನ್ನದ ಪದಕ ಗಳಿಸಿದರು. ತುಮಕೂರಿನ ಟಿ.ಎಸ್.ಸಂದೀಪ್ (34.50 ನಿ.) ದ್ವೀತಿಯ ಸ್ಥಾನ ಗಳಿಸಿ 10 ಸಾವಿರ ನಗದು ಹಾಗೂ ಬೆಳ್ಳಿ ಪದಕ ಮುಡಿಗೇರಿಸಿಕೊಂಡರು. ಬೆಂಗಳೂರಿನ ಕ್ರೀಡಾಪ್ರಾಧಿಕಾರದ ರಾಜೇಶ್ ಕುಮಾರ್ (36.25 ನಿ.)ದಲ್ಲಿ ತೃತೀಯ ಸ್ಥಾನಗಳಿಸಿ 5 ಸಾವಿರ ರೂ., ನಗದು ಹಾಗೂ ಕಂಚಿನ ಪದಕ ಗೆದ್ದುಕೊಂಡರು.
ಮಹಿಳೆಯರ 10ಕೆ ಮ್ಯಾರಥಾನ್ನಲ್ಲಿ ಬೆಂಗಳೂರಿನ ಎನ್.ಮೇಘಶ್ರೀ 40.43 ನಿಮಿಷದಲ್ಲಿ ಓಡಿ ಪ್ರಥಮ ಸ್ಥಾನ, 15 ಸಾವಿರ ರೂಪಾಯಿ ನಗದು ಮುಡಿಗೇರಿಸಿಕೊಂಡರು. ಬೆಂಗಳೂರಿನ ತನುಶ್ರೀ (42.44 ನಿ.,) ದ್ವೀತಿಯ ಸ್ಥಾನಗಳಿಸಿ 10 ಸಾವಿರ ರೂ., ನಗದು ಹಾಗೂ ಬೆಳ್ಳಿ ಪದಕ ಗೆದ್ದುಕೊಂಡರು. ತೃತೀಯ ಸ್ಥಾನ ಗಳಿಸಿದ ಪಂಜಾಬ್ನ ಪೂಜಾ ಕುಮಾರಿ (44.03 ನಿ.,) 5 ಸಾವಿರ ರೂ., ನಗದು ಹಾಗೂ ಕಂಚಿನ ಪದಕಗಳಿಸಿದರು.
5 ಕೆ ಮ್ಯಾರಥಾನ್ : ಪುರಷರ ವಿಭಾಗದ 5 ಕೆ ಮ್ಯಾರಥಾನ್ನಲ್ಲಿ ಬೆಂಗಳೂರಿನ ಸಾಯ್ನ ಗೋಪಿ (16.21 ನಿ.,) ಪ್ರಥಮ ಸ್ಥಾನಗಳಿಸಿ 10 ಸಾವಿರ ರೂ., ನಗದು ಹಾಗೂ ಚಿನ್ನದ ಪದಕ ಪಡೆದರು. ದ್ವೀತಿಯ ಸ್ಥಾನ ಪಡೆದ ಮಂಗಳೂರಿನ ರಂಗಣ್ಣ (16.33 ನಿ.) 6 ಸಾವಿರ ರೂ., ನಗದು ಹಾಗೂ ಬೆಳ್ಳಿ ಪದಕಗೆದ್ದುಕೊಂಡರು. ಜಮಖಂಡಿಯ ಸಂಗಮೇಶ್ ಅರ್ಜುನ ಹಳ್ಳಿ (16.43 ನಿ.,) ತೃತೀಯ ಸ್ಥಾನ ಗಳಿಸಿ 4 ಸಾವಿರ ರೂ., ನಗದು ಹಾಗೂ ಕಂಚಿನ ಪದಕ ಮುಡಿಗೇರಿಸಿಕೊಂಡರು.
5ಕೆ ಮ್ಯಾರಥಾನ್ ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಡಿವೈಇಎಸ್ನ ಪ್ರಣತಿ ಪ್ರಥಮ ಸ್ಥಾನದೊಂದಿಗೆ 10 ಸಾವಿರ ರೂ., ನಗದು, ಚಿನ್ನದ ಪದಕ ಗೆದ್ದುಕೊಂಡರು. ರಾಜಸ್ಥಾನದ ಬಬ್ಲಿ ಗುಜ್ಜಾರ್ ದ್ವೀತಿಯ ಸ್ಥಾನಗಳಿಸಿ 6 ಸಾವಿರ ರೂ., ನಗದು, ಬೆಳ್ಳಿ ಪದಕ ಪಡೆದರು. ಬೆಂಗಳೂರಿನ ಡಿವೈಇಎಸ್ನ ಎಂ.ಎನ್.ಸೀಮಾ ತೃತೀಯ ಸ್ಥಾನಗಳಿಸಿ 4 ಸಾವಿರ ರೂ., ನಗದು ಕಂಚಿನ ಪದಕ ಗೆದ್ದುಕೊಂಡರು.
50 ವರ್ಷ ಮೇಲ್ಪಟ್ಟವರಿಗೆ ಆಯೋಜಿಸಿದ್ದ 10ಕೆ ಮ್ಯಾರಥಾನ್ನಲ್ಲಿ ಬೆಂಗಳೂರಿನ ರಾಜಣ್ಣ ಪ್ರಥಮ ಸ್ಥಾನಗಳಿಸಿ 15 ಸಾವಿರ ನಗದು ಗೆದ್ದುಕೊಂಡರು. ಕೇರಳಾದ ಕೋಚಿಕೋಡ್ನ ಟಿ.ಬಾಲಕೃಷ್ಣ ದ್ವೀತಿಯ ಸ್ಥಾನದೊಂದಿಗೆ 10 ಸಾವಿರ ರೂ., ನಗದು ಬಹುಮಾನಗಳಿಸಿದರು. ದಾವಣಗೆರೆಯ ಕೆ.ಎಚ್.ಅಣ್ಣಪ್ಪ ತೃತೀಯ ಸ್ಥಾನಗಳಿಸಿ 5 ಸಾವಿರ ರೂ., ನಗದು ಬಹುಮಾನ ಗೆದ್ದುಕೊಂಡರು.
ಅಶ್ವಿನಿ ಅಕ್ಕುಂಚಿ ಚಾಲನೆ: ಭಾನುವಾರ ಬೆಳಗ್ಗೆ ಸುರಿದ ಧಾರಾಕಾರ ಮಳೆಯ ನಡುವೆಯೇ 10ಕೆ ಮ್ಯಾರಥಾನ್ ಸ್ಪರ್ಧೆಗೆ ಖ್ಯಾತ ಅಥ್ಲೀಟ್ ಅಶ್ವಿನಿ ಅಕ್ಕುಂಚಿ ಚಾಲನೆ ನೀಡಿದರು. ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಸಾನ್ನಿಧ್ಯವಹಿಸಿದ್ದರು. ಸಿದ್ಧಗಂಗಾ ವೈದ್ಯಕಿಯ ಕಾಲೇಜಿನ ಕಾರ್ಯದರ್ಶಿ ಟಿ.ಎಂ.ಸ್ವಾಮಿ, ಸಿದ್ದಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್, ಹೃದ್ರೋಗ ತಜ್ಞ ಡಾ.ಎಚ್.ಎಂ.ಭಾನುಪ್ರಕಾಶ್, ಸಿದ್ಧಗಂಗಾ ವೈದ್ಯಕಿಯ ಕಾಲೇಜಿನ ಪ್ರಾಚಾರ್ಯರಾದ ಡಾ.ಶಾಲಿನಿ, ವೈದ್ಯಕಿಯ ಅಧೀಕ್ಷಕ ಡಾ.ನಿರಂಜನಮೂರ್ತಿ, ಡಾ.ಶರತ್ ಕುಮಾರ್, ಡಾ.ನಿಲೇಶ್, ಡಾ.ರವಿಚಂದ್ರ, ಸಿಇಒ ಡಾ.ಸಂಜೀವಕುಮಾರ್, ಜಿಲ್ಲಾ ಅಥ್ಲಿಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ಎ.ಎನ್. ಪ್ರಭಾಕರ್, ದೈಹಿಕ ಶಿಕ್ಷಣನಿರ್ದೇಶಕರುಗಳಾದ ಡಿ.ಎಸ್.ಯೋಗೀಶ್, ಕೆ.ಎಸ್.ಜೈಶಂಕರ್, ಟಿ.ಆರ್.ಬಸವರಾಜು, ಉಪಸ್ಥಿತರಿದ್ದರು.
ಮ್ಯಾರಥಾನ್ಗೆ ಚಾಲನೆ ನೀಡಿದ ಖ್ಯಾತ ಅಥ್ಲೀಟ್ ಅಶ್ವಿನಿ ಅಕ್ಕುಂಚಿ ಮಾತನಾಡಿ ಕ್ರೀಡಾ ಚಟುವಟಿಕೆಗಳೇ ಪರಿಪೂರ್ಣ ಆರೋಗ್ಯದ ಗುಟ್ಟು. ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಂಡಾಗ ಮಾತ್ರ ಸದೃಢ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಮಳೆಯಲ್ಲು ಮ್ಯಾರಥಾನ್ ಸ್ಪರ್ಧೆಯಲ್ಲಿ ಓಡಿದ ಅಥ್ಲೀಟ್ಗಳ ಕ್ರೀಡಾಸ್ಪೂರ್ತಿ ಪ್ರಶಂಸನಾರ್ಹ ಎಂದರು.
ಮನುಷ್ಯ ಆಚಾರ-ವಿಚಾರಗಳ ಜತೆಗೆ ವ್ಯಾಯಾಮ, ಮಿತ ಆಹಾರ ರೂಢಿಸಿಕೊಂಡಾಗ ಮಾತ್ರ ಉತ್ತಮಆರೋಗ್ಯ ದೊರಕಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಹೃದಯಸಂಬಂಧಿ ಕಾಯಿಲೆಗಳು ಹೆಚ್ಚುತ್ತಿದ್ದು, ದೈಹಿಕ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಸಿದ್ದಲಿಂಗ ಶ್ರೀಗಳು ಮಠಾಧ್ಯಕ್ಷರು, ಸಿದ್ದಗಂಗಾಮಠ