ನಟಿ ಶುಭ ಪೂಂಜಾ ತಾಯಿ ನಿಧನ; ‘ಅಮ್ಮಾ ನನ್ನನ್ನು ಯಾಕೆ ಬಿಟ್ಟು ಹೋದೆ?’ ನಟಿಯ ಭಾವುಕ ಪೋಸ್ಟ್ | Shubha Poonja

Untitled design - 2025-03-07T175919.830
Published on

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಬಹಳ ವರ್ಷಗಳಿಂದ ಗುರುತಿಸಿಕೊಂಡಿರುವ ನಟಿ ಶುಭಾ ಪೂಂಜಾ (Shubha Poonja) ಅವರ ತಾಯಿ ಸುಲೋಚನ ಪೂಂಜಾ ಇಹಲೋಕ ತ್ಯಜಿಸಿದ್ದಾರೆ. ನಟಿ ಶುಭ ಪೂಂಜಾ ಅಗಲಿದ ಅಮ್ಮನನ್ನು ಕುರಿತ ಭಾವುಕ ಪೋಸ್ಟ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಪೂಂಜಾ ತಾಯಿ ಅವರ ಶ್ವಾಸಕೋಶದಲ್ಲಿ ನೀರು ತುಂಬಿದ್ದ ಕಾರಣ ಆರೋಗ್ಯದಲ್ಲಿ ಏರುಪೇರಾಗಿತ್ತು ಎನ್ನಲಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶುಭ ಪೂಂಜಾ ತಾಯಿ, ಮಾರ್ಚ್ 6ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಅಮ್ಮನ ಜತೆಗಿನ ಫೋಟೊಗಳನ್ನು ಹಂಚಿಕೊಂಡಿರುವ ಶುಭ ಪೂಂಜಾ, ಅಮ್ಮ ನನ್ನ ನೀನು ಯಾಕೆ ಬಿಟ್ಟು ಹೋದೆ. ನೀನು ಇಲ್ಲದೆ ನನಗೆ ಜೀವನವಿಲ್ಲ. ನಿನ್ನ ಬಿಟ್ಟು ನನಗೆ ಬದುಕಕ್ಕೆ ಬರೋದು ಇಲ್ಲ. 24 ಗಂಟೆ ನಿನ್ನ ಜತೆಯಲ್ಲೆ ಇರುತ್ತಿದ್ದೆ. ಈಗ ನಾನು ಏನು ಮಾಡಲಿ ಎಲ್ಲಿ ಹೋಗಲಿ ಯಾರಿಗೋಸ್ಕರ ವಾಪಸ್ ಮನೆಗೆ ಬರಲಿ. ನೀನು ನನ್ನ ಯಾಕೆ ಬಿಟ್ಟು ಹೋದೆ ನನ್ನ ಇಡೀ ಜೀವನಕ್ಕೆ ಅರ್ಥವಿಲ್ಲದೆ ಆಯ್ತು ನನ್ನ ಇಡೀ ಜೀವನವೇ ನೀನಾಗಿದ್ದೆ ನನ್ನ ಯಾಕೆ ಬಿಟ್ಟು ಹೋದೆ' ಎಂದು ಬರೆದಿದ್ದಾರೆ. ಅವಳಿಲ್ಲದ ಜೀವನವನ್ನು ನಾನು ಊಹಿಸಲೂ ಸಾಧ್ಯವಿಲ್ಲ. ಅವಳಿಲ್ಲದ ನನ್ನ ಜೀವನಕ್ಕೆ ಅರ್ಥವೂ ಇಲ್ಲ. ನನ್ನ ಹೃದಯ ಛಿದ್ರವಾಗಿದೆ, ಏಕೆಂದರೆ ನನ್ನ ತಾಯಿಯೇ ನನಗೆ ಎಲ್ಲವೂ. ನನ್ನ ತಾಯಿ ಜತೆ ನನ್ನ ನಗುವೂ ಕಳೆದು ಹೋಗಿದೆ ಎಂದು ನೋವನ್ನು ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net